ಹೊಸ ಡೇಟಾ ರಕ್ಷಣಾ ನಿಯಮವನ್ನು ಅರ್ಥಮಾಡಿಕೊಳ್ಳುವುದು
DPAP ಕಾಯ್ದೆ ಅಥವಾ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಕಾಯ್ದೆಯನ್ನು ಆಗಸ್ಟ್ 9, 2023ರಂದು ಜಾರಿಗೊಳಿಸಲಾಯಿತು ಮತ್ತು ಇದು ಭಾರತದಲ್ಲಿ ಡಿಜಿಟಲ್ ವೈಯಕ್ತಿಕ ಡಾಟಾದ ಸಂಗ್ರಹಣೆ, ಬಳಕೆ ಮತ್ತು ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಇದು ಡೇಟಾ ನಿಯಮಗಳ ಗೌಪ್ಯತಾ ಹಕ್ಕುಗಳನ್ನು ಒತ್ತಾಯಿಸುವ ಮೂಲಕ ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ ಮಾದರಿಗಳಲ್ಲಿನ (ಮತ್ತು ಕ್ರಮೇಣವಾಗಿ ಡಿಜಿಟಲ್ ಮಾಡಿರುವ) ಡೇಟಾ ಸಂಗ್ರಹಣೆಗೆ ಅನ್ವಯವಾಗುತ್ತದೆ. ಈ ನಿಯಮವು ವೈಯಕ್ತಿಕ ಡಾಟಾವನ್ನು ಸಂಗ್ರಹಣೆ ಮಾಡುವ, ಬಳಸುವ ಮತ್ತು ಪ್ರಕ್ರಿಯೆಗೊಳಿಸುವ ಡೇಟಾ ಫಿಡ್ಯೂಶರಿ ಎಂದು ಕರೆಯಲಾಗುವ ಘಟಕಗಳಿಗಾಗಿ ಬಾಧ್ಯತೆಗಳನ್ನು ನೀಡುತ್ತದೆ ಮತ್ತು ಡೇಟಾ ಫಿಡ್ಯೂಶರಿಗಳೊಂದಿಗೆ ತಮ್ಮ ವೈಯಕ್ತಿಕ ಡೇಟಾ ಹಂಚಿಕೊಂಡ ವ್ಯಕ್ತಿಯ ಗೌಪ್ಯತಾ ಹಕ್ಕುಗಳನ್ನು ರಕ್ಷಿಸಲು ಉದ್ದೇಶಿಸಿದೆ.
ಈ ಕೈಪಿಡಿಯು ಲಾಭ-ರಹಿತ ಸಂಸ್ಥೆಗಳು (ನಾನ್ ಪ್ರಾಫಿಟ್ | Non-Profit) DPDP ಕಾಯ್ದೆಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನ್ಯಾವಿಗೇಟ್ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ಕಾಯ್ದೆಯ ಎಲ್ಲಾ ಪ್ರಮುಖ ಸೌಲಭ್ಯಗಳನ್ನು ಮತ್ತು ನಿಮ್ಮ ಸಂಸ್ಥೆಯ ಕೆಲಸದ ಮೇಲೆ ಇದು ಹೇಗೆ ಪ್ರಭಾವ ಬೀರುತ್ತದೆ ಎನ್ನುವ ಅಂಶಗಳನ್ನು ಒಳಗೊಂಡಿದೆ. ಜೊತೆಗೆ ಇದು DPDP ಕಾಯ್ದೆಯ ಕಾರ್ಯಾಚರಣೆ ವಿಧ ಮತ್ತು ಪ್ರಕ್ರಿಯೆಗಳ ಬಗ್ಗೆ ಆಳವಾದ ಮಾಹಿತಿಯನ್ನು ಸಹ ಒಳಗೊಂಡಿದೆ.
ಈ ಕೈಪಿಡಿಯು ಡಾಟಾದೊಂದಿಗೆ ತೊಡಗಿಕೊಳ್ಳುವ ತಂಡಗಳು ಮತ್ತು ಜನರನ್ನು ವಿಶೇಷವಾಗಿ ಒಳಗೊಂಡಂತೆ DPDP ಕಾಯ್ದೆ ಅನ್ನು ಅರ್ಥಮಾಡಿಕೊಳ್ಳಲು ಬಯಸುವ ಲಾಭ-ರಹಿತ ಸಂಸ್ಥೆಗಳಲ್ಲಿನ (ನಾನ್ ಪ್ರಾಫಿಟ್ | Non-Profit) ಯಾವುದೇ ವ್ಯಕ್ತಿಗಾಗಿ ಶಿಫಾರಸ್ಸು ಮಾಡಲಾಗಿದೆ.
ಗಮನಿಸಿ: ಈ ಕೈಪಿಡಿಯು ಕಾನೂನು ಸಲಹೆಯಾಗಿಲ್ಲ ಆದರೆ ಓದುಗರಿಗೆ ಸಾಮಾನ್ಯ ಮಾರ್ಗದರ್ಶನವನ್ನು ನೀಡಲು ಉದ್ದೇಶಿಸಿದೆ. ನಿಮ್ಮ ಸಂದರ್ಭಗಳು ಮತ್ತು ಕಾರ್ಯಾಚರಣೆಗಳಿಗೆ ನಿರ್ದಿಷ್ಟ ವೈಯಕ್ತಿಕಗೊಳಿಸಿದ ಕಾನೂನು ಸಲಹೆಗಾಗಿ ದಯವಿಟ್ಟು ನಿಮ್ಮ ಕಾನೂನು ಸಲಹೆಗಾರರು/ವಕೀಲರೊಂದಿಗೆ ಸಮಾಲೋಚನೆ ನಡೆಸಿ.
ಕೈಪಿಡಿ ಸಾರಾಂಶ:
ಇಂಡಿಯಾ ಪಾರ್ಟ್ನರ್ ನೆಟ್ವರ್ಕ್ ( India Partner Network (IPN)) ಜೊತೆಗೆ ಗೇಮ್ ಚೇಂಜರ್ ನೀತಿಯು, ಮುಂಬರುವ ಡೇಟಾ ರಕ್ಷಣಾ ನೀತಿಯನ್ನು ವಿವರಿಸಲು ಮತ್ತು ಲಾಭ-ರಹಿತ ಸಂಸ್ಥೆಗಳಿಗೆ (ನಾನ್ ಪ್ರಾಫಿಟ್ | Non-Profit) ಇದರ ಉದ್ದೇಶವನ್ನು ವಿವರಿಸಲು ಒಂದು ಕಾರ್ಯಾಗಾರವನ್ನು ( ವರ್ಕ್‌ಶಾಪ್ | Workshop) ನಡೆಸಿತು. ಈ ಕಾರ್ಯಾಗಾರವು ( ವರ್ಕ್‌ಶಾಪ್ | Workshop) ವೈಯಕ್ತಿಕ ಡೇಟಾ ಸಂಗ್ರಹಿಸುವುದು, ನಿರ್ವಹಣೆ ಮಾಡುವುದು ಮತ್ತು ಹಂಚಿಕೆ ಮಾಡುವುದರ ಕುರಿತು ಭಾಗವಹಿಸುವವರು ತಮ್ಮ ಕರ್ತವ್ಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ. ಇದು ಡೇಟಾ ನಿರ್ವಹಣೆಗಾಗಿ ಅತ್ಯುತ್ತಮ ಅಭ್ಯಾಸಗಳು ಮತ್ತು ನಿಯಮಗಳನ್ನು ಅನುಸರಿಸಲು ಮತ್ತು ಸರಿಯಾದ ಅನುಮತಿ ಪಡೆಯುವ ಪ್ರಾಮುಖ್ಯತೆಯ ಕಡೆಗೆ ಒತ್ತು ನೀಡುತ್ತದೆ. ಚರ್ಚೆಯು SOC 2 ಮತ್ತು ಸೈಬರ್ ಅಗತ್ಯತೆಗಳು ರೀತಿಯ ಮಾನದಂಡಗಳನ್ನು ಪೂರೈಸಲು, ಘಟನೆಗಳೊಂದಿಗೆ ವ್ಯವಹರಿಸುವುದು ಮತ್ತು ಪ್ರವೇಶವನ್ನು ನಿಯಂತ್ರಿಸುವುದು ರೀತಿಯ ಡೇಟಾ ಭದ್ರತೆಯ ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸಿತ್ತು. ಭಾಗವಹಿಸುವವರು ಡೇಟಾ ರಕ್ಷಣೆಯನ್ನು ತಮ್ಮ ಆದ್ಯತೆಯನ್ನಾಗಿಸಲು ಮತ್ತು ಹೊಸ ಡೇಟಾ ರಕ್ಷಣಾ ನಿಯಮಗಳಿಗಾಗಿ ತಮ್ಮ ಸಂಸ್ಥೆಗಳನ್ನು ಸಿದ್ಧವಾಗಿಡಲು ಬದಲಾಗುತ್ತಿರುವ ನಿಯಮಗಳೊಂದಿಗೆ ಸರಿಸಮವಾಗಿರುವಂತೆ ಅವರನ್ನು ಪ್ರೋತ್ಸಾಹಿಸಲಾಯಿತು. ಜನರ ಗೌಪ್ಯತೆಯನ್ನು ರಕ್ಷಿಸುವಲ್ಲಿ ಮತ್ತು ಕಾನೂನನ್ನು ಅನುಸರಿಸುವಲ್ಲಿ ಲಾಭ-ರಹಿತ (ನಾನ್ ಪ್ರಾಫಿಟ್ | Non-Profit) ಸಂಸ್ಥೆಗಳು ಎಷ್ಟು ಮುಖ್ಯ ಎನ್ನುವುದರ ಕುರಿತು ಕಾರ್ಯಾಗಾರದಲ್ಲಿ ( ವರ್ಕ್‌ಶಾಪ್ | Workshop) ಒತ್ತು ನೀಡಲಾಯಿತು. ಕಾನೂನು ಅಗತ್ಯತೆಗಳ ಜಾಗೃತಿಯನ್ನು ಮೂಡಿಸುವುದು ಮತ್ತು ಬಲವಾದ ಡೇಟಾ ರಕ್ಷಣಾ ಅಭ್ಯಾಸಗಳನ್ನು ಉತ್ತೇಜಿಸುವ ಮೂಲಕ ಲಾಭ-ರಹಿತ ಸಂಸ್ಥೆಗಳಿಗೆ (ನಾನ್ ಪ್ರಾಫಿಟ್ | Non-Profit) ಡೇಟಾ ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯವಿರುವ ತಿಳಿವಳಿಕೆ ಮತ್ತು ಸಾಧನಗಳನ್ನು ನೀಡುವ ಉದ್ದೇಶವನ್ನು ಸೆಷನ್ (Session) ಹೊಂದಿತ್ತು. ಇದಲ್ಲದೆ, ಕಾರ್ಯಾಗಾರ ( ವರ್ಕ್‌ಶಾಪ್ | Workshop) ಡೇಟಾ ವಿಷಯಕ್ಕೆ ಬಂದಾಗ ಲಾಭ-ರಹಿತ ಸಂಸ್ಥೆಗಳಲ್ಲಿ (ನಾನ್ ಪ್ರಾಫಿಟ್ | Non-Profit) ಡೇಟಾ ರಕ್ಷಣೆ ಮತ್ತು ಗೌಪ್ಯತೆಯ ಅತ್ಯಧಿಕ ಮಾನದಂಡಗಳನ್ನು ನಿರ್ವಹಣೆ ಮಾಡಲು ಸಹಾಯ ಮಾಡುವ ಮೂಲಕ ನಿಯಮಗಳನ್ನು ಜವಾಬ್ದಾರಿಯುತವಾಗಿ ಅನುಸರಿಸುವುದನ್ನು ರೂಢಿ ಮಾಡುವ ಗುರಿ ಹೊಂದಿತ್ತು.