ಹೊಸ ಡೇಟಾ ರಕ್ಷಣಾ ನಿಯಮವನ್ನು ಅರ್ಥಮಾಡಿಕೊಳ್ಳುವುದು: ಪುನರಾವರ್ತಿತ ಪ್ರಶ್ನೆಗಳು ಮತ್ತು ಉತ್ತರಗಳು(FAQ)
DPAP ಕಾಯ್ದೆ ಅಥವಾ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಕಾಯ್ದೆಯನ್ನು ಆಗಸ್ಟ್ 9, 2023ರಂದು ಜಾರಿಗೊಳಿಸಲಾಯಿತು ಮತ್ತು ಇದು ಭಾರತದಲ್ಲಿ ಡಿಜಿಟಲ್ ವೈಯಕ್ತಿಕ ಡಾಟಾದ ಸಂಗ್ರಹಣೆ, ಬಳಕೆ ಮತ್ತು ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಇದು ಡೇಟಾ ನಿಯಮಗಳ ಗೌಪ್ಯತಾ ಹಕ್ಕುಗಳನ್ನು ಒತ್ತಾಯಿಸುವ ಮೂಲಕ ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ ಮಾದರಿಗಳಲ್ಲಿನ (ಮತ್ತು ಕ್ರಮೇಣವಾಗಿ ಡಿಜಿಟಲ್ ಮಾಡಿರುವ) ಡೇಟಾ ಸಂಗ್ರಹಣೆಗೆ ಅನ್ವಯವಾಗುತ್ತದೆ. ಈ ನಿಯಮವು ವೈಯಕ್ತಿಕ ಡಾಟಾವನ್ನು ಸಂಗ್ರಹಣೆ ಮಾಡುವ, ಬಳಸುವ ಮತ್ತು ಪ್ರಕ್ರಿಯೆಗೊಳಿಸುವ ಡೇಟಾ ಫಿಡ್ಯೂಶರಿ ಎಂದು ಕರೆಯಲಾಗುವ ಘಟಕಗಳಿಗಾಗಿ ಬಾಧ್ಯತೆಗಳನ್ನು ನೀಡುತ್ತದೆ ಮತ್ತು ಡೇಟಾ ಫಿಡ್ಯೂಶರಿಗಳೊಂದಿಗೆ ತಮ್ಮ ವೈಯಕ್ತಿಕ ಡೇಟಾ ಹಂಚಿಕೊಂಡ ವ್ಯಕ್ತಿಯ ಗೌಪ್ಯತಾ ಹಕ್ಕುಗಳನ್ನು ರಕ್ಷಿಸಲು ಉದ್ದೇಶಿಸಿದೆ.
ಈ ಕೈಪಿಡಿಯು ಲಾಭ-ರಹಿತ ಸಂಸ್ಥೆಗಳು (ನಾನ್ ಪ್ರಾಫಿಟ್ | Non-Profit) ಇತ್ತೀಚಿಗೆ ಜಾರಿಗೊಳಿಸಿದ ಡೇಟಾ ರಕ್ಷಣಾ ಕಾನೂನುಗಳ ಬಳಕೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನ್ಯಾವಿಗೇಟ್ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ಕಾಯ್ದೆ ಮತ್ತು ಅದರ ಕಾರ್ಯಾಚರಣೆಗಳ ಕುರಿತು ಬಹುತೇಕ ಆಗಿಂದಾಗ್ಗೆ ಕೇಳಲಾಗುವ ಪ್ರಶ್ನೆಗಳನ್ನು(FAQ) ಒಳಗೊಂಡಿದೆ.
ಈ ಕೈಪಿಡಿಯು ಡಾಟಾದೊಂದಿಗೆ ತೊಡಗಿಕೊಳ್ಳುವ ತಂಡಗಳು ಮತ್ತು ಜನರನ್ನು ವಿಶೇಷವಾಗಿ ಒಳಗೊಂಡಂತೆ DPDP ಕಾಯ್ದೆ ಅನ್ನು ಅರ್ಥಮಾಡಿಕೊಳ್ಳಲು ಬಯಸುವ ಲಾಭ-ರಹಿತ ಸಂಸ್ಥೆಗಳ್ಲಲಿರುವ (ನಾನ್ ಪ್ರಾಫಿಟ್ | Non-Profit) ಯಾವುದೇ ವ್ಯಕ್ತಿಗಾಗಿ ಶಿಫಾರಸ್ಸು ಮಾಡಲಾಗಿದೆ
ಗಮನಿಸಿ: ಈ ಕೈಪಿಡಿಯನ್ನು ಗೇಮ್ ಚೇಂಜರ್ ನೀತಿಯೊಂದಿಗಿನ ಸಹಭಾಗಿತ್ವದಲ್ಲಿ IPN ಮೂಲಕ ಆಯೋಜಿಸಿದ ವೆಬಿನಾರ್ (Webinar) ನಿಂದ ತೆಗೆದುಕೊಳ್ಳಲಾಗಿದೆ. ಈ ಕೈಪಿಡಿಯು ಕಾನೂನು ಸಲಹೆಯಾಗಿಲ್ಲ ಆದರೆ ಓದುಗರಿಗೆ ಸಾಮಾನ್ಯ ಮಾರ್ಗದರ್ಶನವನ್ನು ನೀಡಲು ಉದ್ದೇಶಿಸಿದೆ. ನಿಮ್ಮ ಸಂದರ್ಭಗಳು ಮತ್ತು ಕಾರ್ಯಾಚರಣೆಗಳಿಗೆ ನಿರ್ದಿಷ್ಟ ವೈಯಕ್ತಿಕಗೊಳಿಸಿದ ಕಾನೂನು ಸಲಹೆಗಾಗಿ ದಯವಿಟ್ಟು ನಿಮ್ಮ ಕಾನೂನು ಸಲಹೆಗಾರರು/ವಕೀಲರೊಂದಿಗೆ ಸಮಾಲೋಚನೆ ನಡೆಸಿ.