ಲಾಭ ರಹಿತ ಸಂಸ್ಥೆಗಳ ಬ್ರ್ಯಾಂಡ್ ರಚಿಸುವುದು
ಸಂಸ್ಥೆಯ ಪಾಲುದಾರರ (ಪಾರ್ಟ್ನರ್ | Partner) ಮನಸ್ಸಿನಲ್ಲಿ/ದೃಷ್ಟಿಕೋನದಲ್ಲಿ ಸಂಸ್ಥೆ ಅಥವಾ ಅದರ ಯೋಜನೆಗಳು/ಉಪಕ್ರಮಗಳಿಗಾಗಿ ಒಂದು ವಿಶಿಷ್ಟವಾದ ಗುರುತು, ಚಿತ್ರಣ ಮತ್ತು ದೃಷ್ಟಿಕೋನವನ್ನು ರಚಿಸುವ ಮತ್ತು ನಿರ್ವಹಣೆ ಮಾಡುವ ಪ್ರಕ್ರಿಯೆಯನ್ನು ಬ್ರ್ಯಾಂಡಿಂಗ್ ಒಳಗೊಂಡಿದೆ
ಪಾಲುದಾರರಿಗೆ (ಪಾರ್ಟ್ನರ್ | Partner) ನಿಮ್ಮ ಗುರಿ, ಮೌಲ್ಯಗಳು ಮತ್ತು ಪ್ರಭಾವವನ್ನು ಪರಿಣಾಮಕಾರಿಯಾಗಿ ತಿಳಿಸಲು ಬ್ರ್ಯಾಂಡಿಂಗ್ ಲಾಭ-ರಹಿತ ಸಂಸ್ಥೆಗಳಿಗೆ ನಿರ್ಣಾಯಕ ಪಾತ್ರವಹಿಸುತ್ತದೆ. ಪರಿಣಾಮಕಾರಿ ಬ್ರ್ಯಾಂಡಿಂಗ್ ಮೂಲಕ, ನೀವು ಬೆಂಬಲಿಗರೊಂದಿಗೆ ಹೊಂದಾಣಿಕೆಯಾಗುವಂತಹ, ನಂಬಿಕೆಯನ್ನು ಪೋಷಿಸುವ ಮತ್ತು ಸಂಬಂಧವನ್ನು ವೃದ್ಧಿಸುವ ಬಲಶಾಲಿ ಮತ್ತು ನೆನಪಿನಲ್ಲಿ ಉಳಿಯುವ ಗುರುತನ್ನು ರಚಿಸಬಹುದು.
ಈ ಟ್ಯುಟೋರಿಯಲ್ ಲಾಭ-ರಹಿತ ಸಂಸ್ಥೆಗಳಿಗೆ ಇವುಗಳನ್ನು ಅರ್ಥಮಾಡಿಸಲು ಸಹಾಯ ಮಾಡುತ್ತದೆ:
ಬಲಶಾಲಿ ಬ್ರ್ಯಾಂಡ್ ರಚಿಸಲು ಕಾರ್ಯತಂತ್ರಗಳು ಮತ್ತು ಹಂತಗಳು
ಬಲವಾದ ಕಥೆಗಳನ್ನು ರಚಿಸುವ ಕಲೆ
ಬ್ರ್ಯಾಂಡ್ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವ ಸಾಧನಗಳು
ಬ್ರ್ಯಾಂಡ್ ಗೋಚರತೆಯನ್ನು ಹೆಚ್ಚಿಸಲು ಸಂವಹನ ( ಕಮ್ಯುನಿಕೇಷನ್ | Communication) ಕಾರ್ಯತಂತ್ರವನ್ನು ಹೇಗೆ ರಚಿಸುವುದು
ಈ ಕೈಪಿಡಿಯು ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಮತ್ತು ಸಂವಹನ ( ಕಮ್ಯುನಿಕೇಷನ್ | Communication) ತಂಡಗಳಿಗಾಗಿ ಅಗತ್ಯವಾಗಿದೆ.
ಕೈಪಿಡಿ ಸಾರಾಂಶ:
ಯಾವುದೇ ದೊಡ್ಡ ಅಥವಾ ಸಣ್ಣ ಸಂಸ್ಥೆಯಲ್ಲಿ, ಜನರು ಸಂಪರ್ಕಿಸಬಹುದಾದ ಒಂದು ಬಲವಾದ ಕಥೆ ಬಹಳ ಮುಖ್ಯವಾಗಿದೆ. ಇದು ನಿಮ್ಮನ್ನು ಮತ್ತೊಬ್ಬರಿಂದ ವಿಭಿನ್ನವಾಗಿರಲು ಸಹಾಯಮಾಡುತ್ತದೆ ಮತ್ತು ಉಪಯುಕ್ತ ಪಾಲುದಾರಿಕೆಯನ್ನು( ಪಾರ್ಟ್ನರ್ | Partner) ಸಹ ತರಬಲ್ಲದು. ನೀವು ಬೆಳೆಯುತ್ತಿದ್ದಂತೆ, ಜನರು ನಿಮ್ಮನ್ನು ನೆನಪಿನಲ್ಲಿಡಲು ಕಥೆಯನ್ನು ಹೇಳುವುದನ್ನು ಅದೇ ರೀತಿಯಲ್ಲಿ ಮುಂದುವರೆಸುವುದು ಸಹ ಬಹಳ ಮುಖ್ಯ. ವಿಭಿನ್ನ ಗುಂಪಿನ ಜನರೊಂದಿಗೆ ಮಾತಾಡಲು ಸರಿಯಾದ ವಿಧಾನಗಳನ್ನು ನೀವು ಆಯ್ಕೆ ಮಾಡಬೇಕು, ಇದರಿಂದ ನೀವು ಮಾತಾಡುವುದನ್ನು ಅವರು ಕೇಳಿಸಿಕೊಳ್ಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ, ಇಂಟರ್ನೆಟ್ ಅನ್ನು ಸರಿಯಾಗಿ ಬಳಸುವುದು, ಉತ್ತಮ ವೆಬ್ಸೈಟ್ ಹೊಂದುವುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವುದು ಸಹ ಬಹಳ ಮುಖ್ಯ. ನಿಮ್ಮ ಪ್ರೇಕ್ಷಕರು ಆನ್ಲೈನ್ ನಲ್ಲಿ ಏನನ್ನು ಇಷ್ಟಪಡುತ್ತಾರೆ ಎಂದು ಅರ್ಥಮಾಡಿಕೊಂಡು, ನೀವು ಅವರಿಗೆ ಇಷ್ಟವಾಗುವ ವಿಷಯಗಳನ್ನು ಹಂಚಿಕೊಳ್ಳುವಂತೆ ಸ್ಮಾರ್ಟ್ ಆಗಿರಬೇಕು. ಇಂಟರ್ನೆಟ್ ಬಹಳ ದೊಡ್ಡದಾದರೂ, ಕರಪತ್ರಗಳು ಮತ್ತು ಭಿತ್ತಿಪತ್ರಗಳು ರೀತಿಯ ಸಾಂಪ್ರದಾಯಿಕ ವಿಧಾನಗಳು ಸಹ ನಿಮ್ಮ ಸಂದೇಶವನ್ನು ನೆಡಲು ಸಹಕಾರಿಯಾಗಿದೆ. ಒಂದುವೇಳೆ ನೀವು ನಿಮ್ಮ ಕಥೆಯನ್ನು ಚೆನ್ನಾಗಿ ಹೇಳಬಹುದಾದರೆ ಮತ್ತು ಜನರೊಂದಿಗೆ ಮಾತಾಡಲು ಸರಿಯಾದ ದಾರಿಯನ್ನು ಆಯ್ಕೆಮಾಡಿಕೊಂಡಲ್ಲಿ, ನಿಮ್ಮ ಸಂಸ್ಥೆಯನ್ನು ಹೆಚ್ಚು ಗುರುತಿಸಲಾಗುವುದು ಮತ್ತು ದೊಡ್ಡ ಪ್ರಭಾವ ಹೊಂದಬಹುದು.