ಆನ್ಲೈನ್ ಕ್ರೌಡ್ ಫಂಡಿಂಗ್ ಪ್ರಚಾರವನ್ನು(ಕ್ಯಾಂಪೈನ್ | Campaign) ಹೇಗೆ ರಚಿಸುವುದು
ಆನ್ಲೈನ್ ಕ್ರೌಡ್‌ಫಂಡಿಂಗ್ ಪ್ರಚಾರಗಳು ಇಂಟರ್ನೆಟ್ ವೇದಿಕೆಗಳ ಮೂಲಕ ದೊಡ್ಡ ಸಂಖ್ಯೆಯ ಜನರಿಂದ ಸಣ್ಣ ಮೊತ್ತದ ಹಣವನ್ನು ಸಂಗ್ರಹಿಸುವುದನ್ನು ಒಳಗೊಂಡಿರುತ್ತದೆ. ಇಂದಿನ ಡಿಜಿಟಲ್ ಮುಂದುವರೆದ ಪರಿಸರವ್ಯವಸ್ಥೆಯಲ್ಲಿ ದೇಣಿಗೆಯನ್ನು ಸಂಗ್ರಹಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ. ಈ ಪ್ರಚಾರಗಳು (ಕ್ಯಾಂಪೈನ್ | Campaign) ಸಾಮಾನ್ಯವಾಗಿ ಸಂಭಾವ್ಯ ಡೋನರ್ ಗಳನ್ನು (Donor) ತಲುಪಲು ಸಾಮಾಜಿಕ ಮಾಧ್ಯಮ, ಇಮೇಲ್, ಔಟ್ ರೀಚ್, ಮತ್ತು ಸಮರ್ಪಿತ ಕ್ರೌಡ್‌ಫಂಡಿಂಗ್ ವೇದಿಕೆಗಳು ಅನುವು ಮಾಡಿಕೊಡುತ್ತದೆ. ಆನ್‌ಲೈನ್ ಕ್ರೌಡ್‌ಫಂಡಿಂಗ್ ಪ್ರಚಾರಗಳು (ಕ್ಯಾಂಪೈನ್ | Campaign) ಎನ್‌ಜಿಒಗಳಿಗೆ ವಿಶಾಲ ವ್ಯಾಪ್ತಿಯು, ಪ್ರವೇಶಕ್ಕೆ ಕಡಿಮೆ ಅಡೆತಡೆಗಳು ಮತ್ತು ಬೆಂಬಲವನ್ನು ತ್ವರಿತವಾಗಿ ಸಜ್ಜುಗೊಳಿಸುವ ಸಾಮರ್ಥ್ಯ ಸೇರಿದಂತೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ.
ಆನ್ಲೈನ್ ಕ್ರೌಡ್‌ಫಂಡಿಂಗ್ ಪ್ರಚಾರಗಳನ್ನು(ಕ್ಯಾಂಪೈನ್ | Campaign) ರಚಿಸುವುದು ಮತ್ತು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದು ಹೇಗೆ ಎಂಬುದರ ಬಗ್ಗೆ ಹಂತ ಹಂತದ ಮಾರ್ಗಸೂಚಿಯನ್ನು ಈ ಕೈಪಿಡಿ ನೀಡುತ್ತದೆ.
ಇದು ಒಂದು ಸಂಸ್ಥೆಯಲ್ಲಿರುವ ನಿಧಿ ಸಂಗ್ರಹಣೆ (ಫಂಡ್‌ರೈಸಿಂಗ್ | Fundraising) , ಮಾರ್ಕೆಟಿಂಗ್ ಮತ್ತು ಸಂವಹನ ( ಕಮ್ಯುನಿಕೇಷನ್ | Communication) ತಂಡಗಳಿಗಾಗಿ ಶಿಫಾರಸ್ಸು ಮಾಡಲಾಗಿದೆ.