Technology and Data / Donor Management
ಡೋನರ್ ರಿಪೋರ್ಟಿಂಗ್ ಗಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು
Tutorial
Intermediate
Dhwani RIS
ಡೇಟಾ ಸಂಗ್ರಹಣೆ, ವಿಶ್ಲೇಷಣೆ ಮತ್ತು ದೃಶ್ಯೀಕರಣ ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸುವುದರ ಮೂಲಕ ತಂತ್ರಜ್ಞಾನ ಡೋನರ್ ರಿಪೋರ್ಟಿಂಗ್ ನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು NGOಗಳಿಗೆ ವಾಸ್ತವ ಸಮಯದ ರಿಪೋರ್ಟ್ಸ ಪಡೆಯಲು, ಫಲಿತಾಂಶಗಳನ್ನು ತಿಳಿಯಲು ಮತ್ತು ಪ್ರಭಾವವನ್ನು ಹೆಚ್ಚು ಪರಿಣಾಮಕಾರಿಯಾಗಿ ತಿಳಿಸಲು ಮತ್ತು ಕೊನೆಯದಾಗಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಡೋನರ್ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪರಿಣಾಮಕಾರಿ ಡೋನರ್ ರಿಪೋರ್ಟಿಂಗ್ ಗಾಗಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುವ ಮೂಲ ತಿಳಿವಳಿಕೆಯು ನಾನ್-ಪ್ರಾಫಿಟ್ಸ್ ಗಳಿಗೆ ಅಗತ್ಯವಾಗಿದೆ. ಈ ಟ್ಯುಟೋರಿಯಲ್ ಈ ಕೆಳಗಿನ ಮುಖ್ಯ ಅಂಶಗಳನ್ನು ಒಳಗೊಂಡಿರುತ್ತದೆ:
- ಡೋನರ್ ರಿಪೋರ್ಟಿಂಗ್ ನಲ್ಲಿ ತಂತ್ರಜ್ಞಾನದ ಮುಖ್ಯತೆ ಮತ್ತು ಉದ್ದೇಶ
- ಆರ್ಗನೈಸೇಶನ್ ನಲ್ಲಿ ಅಂತಹ ತಂತ್ರಜ್ಞಾನವನ್ನು ರಚಿಸುವುದು ಮತ್ತು ಅಳವಡಿಸುವ ಹಿಂದೆ ಅಗತ್ಯವಿರುವ ಪ್ರಮುಖ ಹೂಡಿಕೆಗಳು(ಫೈನಾನ್ಸ್, ಸಂಪನ್ಮೂಲಗಳು ಇತ್ಯಾದಿ)
- ನಾನ್-ಪ್ರಾಫಿಟ್ಸ್ ಬಳಸಿಕೊಳ್ಳಬಹುದಾದ ಉಪಯೋಗಿ ಸಾಧನಗಳು ಮತ್ತು ಪ್ಲಾಟ್ಫಾರ್ಮ್ ಗಳ ಪಟ್ಟಿ
- ತಂತ್ರಜ್ಞಾನದ ಅಳವಡಿಕೆಯಲ್ಲಿರುವ ಲಾಭಗಳು ಮತ್ತು ಸಾಮಾನ್ಯ ಸವಾಲುಗಳು
- ತಮ್ಮ ಪ್ರಭಾವವನ್ನು ಅಳೆಯಲು ತಂತ್ರಜ್ಞಾನವನ್ನು ಬಳಸಿದ ಇತರ ಆರ್ಗನೈಸೇಶನ್ ಗಳು ಹಂಚಿಕೊಂಡ ಮಾಹಿತಿ
ಈ ಸಂಪನ್ಮೂಲವನ್ನು ಯಾವುದೇ ಆರ್ಗನೈಸೇಶನ್ ನಾಯಕರು, ಯೋಜನೆ ತಂಡ, ಆರ್ಗನೈಸೇಶನ್ ಒಳಗಿನ M&E ತಂಡಕ್ಕಾಗಿ ಶಿಫಾರಸ್ಸು ಮಾಡಲಾಗಿದೆ.