ಪ್ರಸ್ತಾವನೆಗಳಿಗಾಗಿ( ಪ್ರಪೋಸಲ್ | Proposal) ವಿನಂತಿಯನ್ನು(RFP) ಬರೆಯುವ ಮೂಲ ವಿಷಯಗಳು
ಪ್ರಸ್ತಾವನೆಗಾಗಿ( ಪ್ರಪೋಸಲ್ | Proposal) ವಿನಂತಿಯು(RFP) ಡೋನರ್ ಗಳಿಗೆ ಔಪಚಾರಿಕ ಆಹ್ವಾನ ರೀತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಲಾಭ-ರಹಿತ ಸಂಸ್ಥೆಗಳ ಉಪಕ್ರಮಗಳು ಅಥವಾ ಯೋಜನೆಗಳಿಗೆ ಹೇಗೆ ಬೆಂಬಲಿಸುವುದು ಎನ್ನುವುದರ ಕುರಿತು ಮಾಹಿತಿಯನ್ನು ಒಳಗೊಂಡ ಪ್ರಸ್ತಾವನೆಗಳನ್ನು ( ಪ್ರಪೋಸಲ್ | Proposal)ಸಲ್ಲಿಸುವುದಾಗಿದೆ. ಒಂದು ಬಲವಾದ ಪ್ರಸ್ತಾವನೆಯು( ಪ್ರಪೋಸಲ್ | Proposal) ತನ್ನ ಸಂಭಾವ್ಯ ದಾನಿ(ಡೋನರ್)ಗಳಿಗೆ ಅದರ ಧ್ಯೇಯ, ಗುರಿಗಳು, ಮತ್ತು ಉದ್ದೇಶಿತ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಸಂವಹನ ಮಾಡುತ್ತದೆ. ಇದು ಅನುದಾನವನ್ನು ಪಡೆಯಲು, ವಿಶ್ವಾಸಾರ್ಹತೆಯನ್ನು ನಿರ್ಮಿಸಲು, ಮತ್ತು ಯೋಜನೆಗಳು ಹಾಗೂ ಉಪಕ್ರಮಗಳಿಗಾಗಿ ಸುಭದ್ರ ಬೆಂಬಲವನ್ನು ಪಡೆಯಲು ಸಹಾಯ ಮಾಡುವ ಮೂಲಕ ಅಂತಿಮವಾಗಿ ಲಾಭ-ರಹಿತ ಸಂಸ್ಥೆಗಳಿಗೆ ತಮ್ಮ ಧ್ಯೇಯವನ್ನು ಪೂರೈಸಲು ಮತ್ತು ತಮ್ಮ ಸಮುದಾಯಗಳಲ್ಲಿ ಧನಾತ್ಮಕ ಪ್ರಭಾವ ಬೀರಲು ಅನುವು ಮಾಡಿಕೊಡುತ್ತದೆ.
ಈ ಕೈಪಿಡಿಯು ಈ ಕೆಳಗಿನವುಗಳನ್ನು ಒಳಗೊಂಡಿದೆ:
- ಒಂದು RFP ಮಾರ್ಗಸೂಚಿಗಳ ದಾಖಲೆಯು ಪ್ರಸ್ತಾವನೆಯಲ್ಲಿ( ಪ್ರಪೋಸಲ್ | Proposal) ಇರಬೇಕಾದ ಪ್ರಮುಖ ಅಂಶಗಳನ್ನು ಮತ್ತು ಡೋನರ್ ಅಗತ್ಯತೆಗಳ ಪ್ರಕಾರವಾಗಿ ಒಂದು ಪ್ರಸ್ತಾವನೆಯನ್ನು( ಪ್ರಪೋಸಲ್ | Proposal) ಹೇಗೆ ರಚಿಸುವುದು ಎನ್ನುವುದನ್ನು ಒಳಗೊಂಡಿರುತ್ತದೆ.
- RFPಗಳನ್ನು ಬರೆಯುವಾಗ ಮತ್ತು ಬಜೆಟ್ ಟೆಂಪ್ಲೇಟ್ ಗಳನ್ನು ಭರ್ತಿಮಾಡುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳು
- ಒಂದು ಪ್ರಸ್ತಾವನೆಯನ್ನು( ಪ್ರಪೋಸಲ್ | Proposal) ಪರಿಣಾಮಕಾರಿಯಾಗಿ ಬರೆಯಲು ನೀವು ಅನುಸರಿಸಬೇಕಾದ ಹಂತಗಳ ಕುರಿತು ಸಂವಾದಾತ್ಮಕ ಟ್ಯುಟೋರಿಯಲ್ ವಿಡಿಯೋ
ಈ ಕೈಪಿಡಿಯನ್ನು ನಿಧಿಸಂಗ್ರಹಣೆ ವೃತ್ತಿಪರರು ಬಳಸಬಹುದು.
ಗಮನಿಸಿ: ಇದೊಂದು ಪ್ರಮಾಣಿತ ಟೆಂಪ್ಲೇಟ್ ಆಗಿರುವುದಿಲ್ಲ ಮತ್ತು RFPಗಳ ಭಾಗವಾಗಿ ವಿನಂತಿಸಲಾದ ಮಾಹಿತಿಯು ಸಾಮಾನ್ಯವಾಗಿ ಡೋನರ್ ನಿಂದ ಡೋನರ್ ಗೆ ಬದಲಾವಣೆಯಾಗುತ್ತದೆ. ದಯವಿಟ್ಟು ಈ ಟೆಂಪ್ಲೇಟ್ ಅನ್ನು ಉಲ್ಲೇಖ ಉದ್ದೇಶಗಳಿಗಾಗಿ ಮಾತ್ರ ಬಳಸಿ. ನಿಮ್ಮ ಸಂಸ್ಥೆಯ ಅಗತ್ಯತೆಗಳ ಅನುಸಾರವಾಗಿ ಈ ಟೆಂಪ್ಲೇಟ್ ಅನ್ನು ಮಾರ್ಪಡಿಸಿಕೊಳ್ಳಿ ಎಂದು ಶಿಫಾರಸ್ಸು ಮಾಡುತ್ತೇವೆ. ಈ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯಮಾಡಲು ನಾವು ಸಂತೋಷಪಡುತ್ತೇವೆ. ದಯವಿಟ್ಟು ನಮ್ಮನ್ನು ipn@indiapartnernetwork.co.inಗೆ ಸಂಪರ್ಕಿಸಿ.
ಕೈಪಿಡಿಯ ಸಾರಾಂಶ:
ಈ ಸೆಷನ್ ಕಾರ್ಪೊರೇಟ್ ಗಮನವನ್ನು ಸೆಳೆಯಲು ಡೇಟಾ ಬೆಂಬಲಿತ ಹೇಳಿಕೆಗಳನ್ನು ವಿತರಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಮೂಲಕ CSR ಪ್ರಸ್ತಾವನೆಗಳ( ಪ್ರಪೋಸಲ್ | Proposal) ನಿರ್ಣಾಯಕ ಘಟಕಾಂಶಗಳ ಬಗ್ಗೆ ಗಮನಹರಿಸುತ್ತದೆ. ಅಳತೆಮಾಡಬಲ್ಲ ಫಲಿತಾಂಶಗಳು, ಸ್ಪಷ್ಟ ಊಹೆಗಳು, ಪ್ಲಾನ್ ಗಳ ನಿಗಾವಣೆ ಮತ್ತು ಒಂದು ಬಲವಾದ ಪ್ರಸ್ತಾವನೆಯನ್ನು( ಪ್ರಪೋಸಲ್ | Proposal)ರಚಿಸಲು ಯಶಸ್ವಿ ಕಥೆಗಳನ್ನು ಸೇರಿಸುವುದು ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ. ಅನುಸರಣೆ (ಕಾಂಪ್ಲಯನ್ಸ್ | Compliance ದಾಖಲೆಗಳು, ಅರ್ಜಿದಾರನ ಮಾಹಿತಿ ಮತ್ತು ಸಂಕ್ಷಿಪ್ತ ಕಾರ್ಯನಿರ್ವಾಹಕ ಸಾರಾಂಶಗಳ ಅಗತ್ಯತೆಗಳನ್ನು ಒತ್ತಿಹೇಳುತ್ತಾ ವಿವರವಾದ RFP ಟೆಂಪ್ಲೇಟ್ ಗಳನ್ನು ಒದಗಿಸಲಾಗಿದೆ.
ಉದ್ದೇಶಿತ ವರ್ಗಗಳು, ಆಯ್ಕೆ ಮಾನದಂಡ, ಸಮಯಾವಧಿ ಮತ್ತು ಯೋಜನೆಯ ಹಂತಗಳ ನಿರ್ದಿಷ್ಟತೆಗಳ ಜೊತೆಗೆ ನಾಯಕತ್ವದ ಪ್ರೊಫೈಲುಗಳು ಮತ್ತು ಯೋಜನೆಯ ವಿವರಗಳ ಮೂಲಕ ಹೊಸ NGOಗಳಿಗಾಗಿ ವಿಶ್ವಾಸಾರ್ಹತೆಯನ್ನು ಸ್ಥಾಪಿಸುವುದನ್ನು ಒತ್ತಿಹೇಳಲಾಗಿದೆ. ಪ್ರಸ್ತಾವನೆ( ಪ್ರಪೋಸಲ್ | Proposal) ಮೌಲ್ಯಮಾಪನದಲ್ಲಿ ಬಜೆಟ್ ವಿವರಗಳು ಮತ್ತು ಸಮುದಾಯದ ಕೊಡುಗೆಗಳನ್ನು ಬಳಸಿಕೊಳ್ಳುವ ಸಾಮರ್ಥ್ಯವನ್ನು ಪ್ರಮುಖ ಅಂಶಗಳೆಂದು ಗುರುತಿಸಲಾಗಿದೆ. ಯೋಜನೆಯ ಪ್ಲಾನಿಂಗ್ ನಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ ಪರೋಕ್ಷ ಖರ್ಚುಗಳು ಮತ್ತು ಸಾಂಸ್ಥಿಕ ಸಾಮರ್ಥ್ಯಗಳ ಬಗ್ಗೆಯೂ ಚರ್ಚಿಸಲಾಗಿದೆ.
ಒಟ್ಟಾರೆಯಾಗಿ, ಕೈಪಿಡಿಯು ಕಾರ್ಪೊರೇಟ್ ಮಧ್ಯಸ್ಥಿಕೆಗಾರರೊಂದಿಗೆ ಹೊಂದಾಣಿಕೆಯಾಗುವಂತಹ ಯಶಸ್ವಿ CSRಗಳನ್ನು ರಚಿಸುವಲ್ಲಿ ಕಾರ್ಯತಾಂತ್ರಿಕ ವಿಧಾನ, ಡೇಟಾ ಚಾಲಿತ ಕಥೆನಿರೂಪಣೆ ಮತ್ತು ಪರಿಣಾಮಕಾರಿ ಸಂವಹನದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.