Marketing and Communications / Digital Marketing and Engagement

ಸಾಮಾಜಿಕ ಮಾಧ್ಯಮ ತೊಡಗಿಸಿಕೊಳ್ಳುವಿಕೆಯನ್ನು ಅನುಸರಿಸಲು ಅತ್ಯುತ್ತಮ ಅಭ್ಯಾಸಗಳು

Tutorial
Basic 1NGO

ದೊಡ್ಡ ಪ್ರಮಾಣದಲ್ಲಿ ಮತ್ತು ಕನಿಷ್ಠ ವೆಚ್ಚದಲ್ಲಿ ಪ್ರೇಕ್ಷಕರೊಂದಿಗೆ ನೇರ ಒಡನಾಟಕ್ಕಾಗಿ ಸಾಮಾಜಿಕ ಮಾಧ್ಯಮವು ಒಂದು ವೇದಿಕೆಯನ್ನು ಒದಗಿಸುತ್ತದೆ. ಇದು ಸಂಸ್ಥೆಗಳಿಗೆ ತನ್ನ ಬ್ರ್ಯಾಂಡ್ ಗುರುತನ್ನು ಪ್ರದರ್ಶಿಸಲು, ಬಲವಾದ ವಿಷಯವನ್ನು ಹಂಚಿಕೊಳ್ಳಲು ಮತ್ತು ವಾಸ್ತವ-ಸಮಯದಲ್ಲಿ ಫಾಲೋವರ್ಸ್ ಜೊತೆಗೆ ಪರಸ್ಪರ ಚರ್ಚಿಸಲು ಅನುಮತಿಸುತ್ತದೆ. ಇದು ಇಂದು ನಿಮ್ಮ ಪ್ರೇಕ್ಷಕರ ಜೊತೆಗೆ ಸಂಪರ್ಕಿಸಲು, ನಿಮ್ಮ ಉದ್ದೇಶವನ್ನು ಹೆಚ್ಚಿಸಲು ಮತ್ತು ಅರ್ಥಪೂರ್ಣ ಬದಲಾವಣೆಯನ್ನು ತರಲು ಒಂದು ಅನಿವಾರ್ಯ ಸಾಧನವಾಗಿದೆ. 

ಲಾಭ-ರಹಿತ ಸಂಸ್ಥೆಗಳಿಗಾಗಿ ಸಾಮಾಜಿಕ ಮಾಧ್ಯಮ ಬಳಕೆಗಾಗಿನ ಕೆಲವು ಅತ್ಯುತ್ತಮ ಅಭ್ಯಾಸಗಳಲ್ಲಿ ಪ್ರೇಕ್ಷಕರನ್ನು ಅರ್ಥಮಾಡಿಕೊಳ್ಳುವುದು, ಬಲವಾದ ಕಥೆಗಳನ್ನು ಹೇಳುವುದು, ವಿಶುಯಲ್ಸ್ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಮತ್ತು ಅಧಿಕೃತ ಹಾಗೂ ಪಾರದರ್ಶಕ ಸಂವಹನವನ್ನು ಪೋಷಿಸುವುದು ಒಳಗೊಂಡಿದೆ. ಸಂವಹನವನ್ನು ಪ್ರೋತ್ಸಾಹಿಸುವುದು, ಹ್ಯಾಷ್ ಟ್ಯಾಗ್ಸ್ ಬಳಸಿಕೊಳ್ಳುವುದು, ನಿಯಮಿತವಾಗಿ ಪೋಸ್ಟ್ ಮಾಡುವುದು ಮತ್ತು ಕಾರ್ಯವನ್ನು ಅಳತೆ ಮಾಡುವ ಮೂಲಕ NGOಗಳು ತಮ್ಮ ಪ್ರೇಕ್ಷಕರ ಜೊತೆಗೆ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಬಹುದು, ನಂಬಿಕೆಯನ್ನು ಬೆಳೆಸಿಕೊಳ್ಳಬಹುದು ಮತ್ತು ಅವರ ಉದ್ದೇಶವನ್ನು ಈಡೇರಿಸಬಹುದು. 

ಈ ಕೈಪಿಡಿಯು ಲಾಭ-ರಹಿತ ಸಂಸ್ಥೆಗಳು (ನಾನ್‌ ಪ್ರಾಫಿಟ್| nonprofit) ತಮ್ಮ ಸಾಮಾಜಿಕ ಮಾಧ್ಯಮ ಉಪಸ್ಥಿತಿಯನ್ನು ಪರಿಣಾಮಕಾರಿಯಾಗಿ ಗರಿಷ್ಠಗೊಳಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಸಹಾಯ ಮಾಡುವುದನ್ನು ಉದ್ದೇಶಿಸಿದೆ. ಈ ಟ್ಯುಟೋರಿಯಲ್ ನಲ್ಲಿ ಒಳಗೊಂಡಿರುವ ಅಂಶಗಳೆಂದರೆ: 

ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ನಿಮ್ಮ ಪ್ರೇಕ್ಷಕರೊಂದಿಗೆ ತೊಡಗಿಸಿಕೊಳ್ಳುವ ಮತ್ತು ಸಂಪರ್ಕ ಬೆಳೆಸುವ ಕಲೆಯನ್ನು ಕಲಿಯುವಿರಿ 

ಪ್ರೇಕ್ಷಕರು ಮತ್ತು ಸಂಭಾವ್ಯ ದಾನಿ(ಡೋನರ್)ಗಳಿಗೆ ನಿಮ್ಮ ಸಾಂಸ್ಥಿಕ ಬ್ರ್ಯಾಂಡ್ ಅನ್ನು ಉತ್ತೇಜಿಸಲು, ತೊಡಗಿಸಿಕೊಳ್ಳುವಿಕೆಯನ್ನು ವರ್ಧಿಸಲು ನಿಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳಿಗಾಗಿ ವೈಯಕ್ತಿಕಗೊಳಿಸಿದ ಸಾಮಾಜಿಕ ಮಾಧ್ಯಮ ಕಾರ್ಯತಂತ್ರವನ್ನು ಯೋಜಿಸುವುದು ಮತ್ತು ರಚಿಸುವುದು 

ಈ ಕೈಪಿಡಿಯು ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕರು ಮತ್ತು ಸಂವಹನ ವೃತ್ತಿಪರರಿಗೆ ಶಿಫಾರಸ್ಸು ಮಾಡಲಾಗಿದೆ. 

ಕೈಪಿಡಿ ಸಾರಾಂಶ: 

ಈ ಸೆಷನ್ ಲಾಭ-ರಹಿತಗಳಿಗಾಗಿ ಸಾಮಾಜಿಕ ಮಾಧ್ಯಮದ ಅತ್ಯುತ್ತಮ ಅಭ್ಯಾಸಗಳ ಮೇಲೆ ಗಮನ ಹರಿಸುತ್ತದೆ. ಇದರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬ್ರ್ಯಾಂಡ್ ನಿರ್ಮಾಣ ಮತ್ತು ಕಾರ್ಯತಾಂತ್ರಿಕ ಸಂವಹನದ ಸಂಬಂಧಿಸಿ ಚರ್ಚೆ ನಡೆಸಲಾಗಿದೆ. ಬಲವಾದ ಮಾಹಿತಿಯನ್ನು ರಚಿಸಲು, ಉದ್ದೇಶಿತ ಪ್ರೇಕ್ಷಕರನ್ನು ಅರ್ಥಮಾಡಿಕೊಳ್ಳುವುದು ಮತ್ತು ಪಾಲುದಾರರೊಂದಿಗೆ (ಪಾರ್ಟ್ನರ್ | Partner) ತೊಡಗಿಸಿಕೊಳ್ಳುವುದರಲ್ಲಿ ವಿಸ್ಯುಯಲ್ ಕಥೆ ಹೇಳುವ ಪ್ರಾಮುಖ್ಯತೆಯ ಕುರಿತು ಪರಿಣಿತರ ಅವಲೋಕನಗಳನ್ನು ಒದಗಿಸಲಾಯಿತು. ಇನ್ನು ಸೆಷನ್ ನಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಅಳತೆ ಮಾಡಲು ಅನಾಲಿಟಿಕ್ಸ್ ಬಳಕೆ ಮತ್ತು ಅನೇಕ ವೇದಿಕೆಗಳ ಮೂಲಕ ವಿಭಿನ್ನ ಮಾಹಿತಿ ವಿಧಗಳ ಪರಿಣಾಮಕಾರಿತ್ವವನ್ನು ಸಹ ಒತ್ತಿಹೇಳಿತು. 


Please login or signup to view the resource.
Signup
ಸಾಮಾಜಿಕ-ಮಾಧ್ಯಮ-ತೊಡಗಿಸಿಕೊಳ್ಳುವಿಕೆಯನ್ನು-ಅನುಸರಿಸಲು-ಅತ್ಯುತ್ತಮ-ಅಭ್ಯಾಸಗಳು.pdf
1 MB
ಸಾಮಾಜಿಕ ಮಾಧ್ಯಮ ತೊಡಗಿಸಿಕೊಳ್ಳುವಿಕೆಯನ್ನು ಅನುಸರಿಸಲು ಅತ್ಯುತ್ತಮ ಅಭ್ಯಾಸಗಳು
59:35
Share your feedback!
Did you find our resources useful and relevant? We'd love to hear from you
0.0 rating
0
Views
0
Downloads
Related Resources