Program Design and Delivery / Monitoring & Evaluation

ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ (M&E) ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವುದು

Tutorial
Basic Sattva Consulting

ಮೇಲ್ವಿಚಾರಣೆ ಮತ್ತು ಮೌಲ್ಯಮಾಪನವು ಆರ್ಗನೈಸೇಶನ್ ಗುರಿಗಳನ್ನು ಸಾಧಿಸಲು ಚಟುವಟಿಕೆಗಳು ಮತ್ತು ಅದರ ಫಲಿತಾಂಶಗಳು ಸಹಾಯ ಮಾಡುತ್ತಿವೆಯೇ ಎಂದು ಗಮನವಿಡುವ ಪ್ರಕ್ರಿಯೆಯಾಗಿದೆ. ಯಾವುದು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ದೊಡ್ಡ ಪರಿಣಾಮವನ್ನು ಉಂಟು ಮಾಡಲು ಯಾವುದನ್ನು ಬದಲಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ನಾನ್-ಪ್ರಾಫಿಟ್ಸ್ ಗಳಿಗೆ (Non-profits) ಸಹಾಯ ಮಾಡುತ್ತದೆ. ಪ್ಲಾನಿಂಗ್, ಅನುಷ್ಠಾನ ಮತ್ತು ಮೌಲ್ಯಮಾಪನಕ್ಕಾಗಿ ರಚಿಸಿದ ಚೌಕಟ್ಟುಗಳನ್ನು ಒದಗಿಸುವ ಮೂಲಕ ಪರಿಣಾಮಕಾರಿ M&E ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವಲ್ಲಿ ಥಿಯರಿ ಆಫ್ ಚೇಂಜ್ (ಥಿಯರಿ  ಚೇಂಜ್ | Theory of Change [ToC]) ಮತ್ತು ಲಾಜಿಕಲ್ ಫ್ರೇಮ್ ವರ್ಕ್ ಅಪ್ರೋಚ್ (ಲಾಜಿಕಲ್ ಫ್ರೇಮ್ವರ್ಕ್ ಅಪ್ರೋಚ್ | Logical Framework Approach [LFA]) ಬಹಳ ನಿರ್ಣಯಕಾರಿ ಪಾತ್ರ ವಹಿಸುತ್ತದೆ.  

ToC ಹೇಗೆ ಮತ್ತು ಏಕೆ ಬದಲಾವಣೆ ಸಂಭವಿಸುತ್ತದೆ ಎಂಬುದರ ಬಗ್ಗೆ ವಿಶಾಲವಾದ ತಿಳುವಳಿಕೆಯನ್ನು ನೀಡುತ್ತದೆ, ಪ್ರೋಗ್ರಾಂ ವಿನ್ಯಾಸಕರು (ಪ್ರೋಗ್ರಾಮ್ ರ್ಸ್ | program designers) ಊಹೆಗಳು, ಮಾರ್ಗಗಳು ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ವ್ಯಕ್ತಪಡಿಸಲು ಅರಿವು ಮಾಡಿಕೊಡುತ್ತದೆ, ಹೀಗಾಗಿ ಪ್ರೋಗ್ರಾಂ ಪರಿಣಾಮಕಾರಿತ್ವ ಮತ್ತು ಪ್ರಭಾವದ ಮೌಲ್ಯಮಾಪನವನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ, LFA ಯೋಜನೆಯ ಗುರಿಗಳನ್ನು, ಉದ್ದೇಶಗಳನ್ನು, ಚಟುವಟಿಕೆಗಳನ್ನು ಮತ್ತು ಸೂಚಕಗಳನ್ನು ಗುರುತಿಸಲು ಸಹಾಯ ಮಾಡುವ ಮೂಲಕ ಜೋಡಣೆ ಮತ್ತು ಸುಸಂಬದ್ಧತೆಯನ್ನು ಖಾತ್ರಿಪಡಿಸುತ್ತದೆ.   

ಈ ಟ್ಯುಟೋರಿಯಲ್ (ಟುಟೋರಿಯಲ್ | Tutorial) ಮೇಲ್ವಿಚಾರಣೆ  ಮತ್ತು ಮೌಲ್ಯಮಾಪನ (M&E) ಯೋಜನೆಗಳ ವಿನ್ಯಾಸಗೊಳಿಸುವ ಮೂಲ ಪರಿಕಲ್ಪನೆಗಳನ್ನು ಒಳಗೊಂಡಿದೆ. ಅವುಗಳೆಂದರೆ: 

  1. M&E ಮತ್ತು ಪ್ರಮುಖ ಪರಿಕಲ್ಪನೆಗಳಿಗೆ ಅಗತ್ಯತೆ  
  2. ಥಿಯರಿ ಆಫ್ ಚೇಂಜ್(ToC) ಮತ್ತು ಲಾಗ್ ಫ್ರೇಮ್ ವರ್ಕ್(LFA), ಮತ್ತು ಎರಡರ ನಡುವಿನ ಪ್ರಮುಖ ವ್ಯತ್ಯಾಸ 
  3. ಚೌಕಟ್ಟುಗಳು ಮತ್ತು ಸಾಧನಗಳ ಮೂಲಕ ನಿಮ್ಮ ಆರ್ಗನೈಸೇಶನ್ ಗಾಗಿ ToC ಮತ್ತು LFA ನಿರ್ಮಿಸುವ ವಿವರವಾದ ಪ್ರಕ್ರಿಯೆ 
  4. LFA ಗೆ ಅನುಗುಣವಾಗಿ ಫಲಿತಾಂಶಗಳು ಮತ್ತು ಫಲಿತಾಂಶದ ಸೂಚಕಗಳನ್ನು ವ್ಯಾಖ್ಯಾನಿಸುವುದು

ಈ ಸಂಪನ್ಮೂಲವನ್ನು ಆರ್ಗನೈಸೇಶನ್ ನಲ್ಲಿ ನಾಯಕತ್ವ, ಯೋಜನಾ ತಂಡ ಮತ್ತು M&E ತಂಡಕ್ಕಾಗಿ ಶಿಫಾರಸ್ಸು ಮಾಡಲಾಗಿದೆ. 


Please login or signup to view the resource.
Signup
ಪರಿಣಾಮಕಾರಿ-ನಿಗಾವಣೆ-ಮತ್ತು-ಮೌಲ್ಯಮಾಪನME-ವ್ಯವಸ್ಥೆಗಳನ್ನು-ವಿನ್ಯಾಸಗೊಳಿಸುವುದು-1-1.pdf
430 KB
ಪರಿಣಾಮಕಾರಿ-ನಿಗಾವಣೆ-ಮತ್ತು-ಮೌಲ್ಯಮಾಪನME-ವ್ಯವಸ್ಥೆಗಳನ್ನು-ವಿನ್ಯಾಸಗೊಳಿಸುವುದು-2.pdf
1 MB
ಪರಿಣಾಮಕಾರಿ ನಿಗಾವಣೆ ಮತ್ತು ಮೌಲ್ಯಮಾಪನ(M&E) ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವುದು
1:21:32
Share your feedback!
Did you find our resources useful and relevant? We'd love to hear from you
0.0 rating
0
Views
0
Downloads
Related Resources