Technology and Data / Internal IT

ಓಪನ್-ಸೋರ್ಸ್ ಪರಿಹಾರಗಳೊಂದಿಗೆ ಲಾಭ-ರಹಿತ ಸಂಸ್ಥೆಗಳಿಗೆ ಅಧಿಕಾರ

Tutorial
Intermediate Tech4Good Community

ಇಂದಿನ ಡಿಜಿಟಲ್ ಯುಗವು ಲಾಭ-ರಹಿತ ಸಂಸ್ಥೆಗಳ ಪರಿಣಾಮಕಾರಿ ಕಾರ್ಯಾಚರಣೆಗಾಗಿ ವ್ಯವಸ್ಥೆಗಳನ್ನು ವೈಯಕ್ತಿಕಗೊಳಿಸಲು ಹಾಗೂ ಈ ವ್ಯವಸ್ಥೆಗಳ ಮೇಲೆ ಅಗತ್ಯವಿರುವ ತರಬೇತಿ ಮತ್ತು ಸಾಮಾರ್ಥ್ಯ ನಿರ್ಮಿಸುವ ರೀತಿಯ ಅನೇಕ ಕ್ಷೇತ್ರಗಳಲ್ಲಿ ಲಭ್ಯವಿರುವ ತಂತ್ರಜ್ಞಾನದ ಕುರಿತು ಲಾಭ-ರಹಿತ ಸಂಸ್ಥೆಗಳು (ನಾನ್‌ ಪ್ರಾಫಿಟ್| nonprofit) ತಿಳಿವಳಿಕೆಯನ್ನು ಹೊಂದಿರುವ ಅಗತ್ಯತೆ ಒದಗಿಸುತ್ತದೆ.   

ಓಪನ್ ಸೋರ್ಸ್ ತಂತ್ರಜ್ಞಾನವೆಂದರೆ ಬಳಕೆದಾರರಿಗಾಗಿ ನೋಡಲು, ಮಾರ್ಪಡಿಸಲು ಮತ್ತು ವಿತರಿಸಲು ಮುಕ್ತವಾಗಿ ಲಭ್ಯವಿರುವ ತನ್ನ ಸೋರ್ಸ್ ಕೋಡ್ ನೊಂದಿಗೆ ಇರುವ ಸಾಫ್ಟವೇರ್ ಆಗಿದೆ. ಬಳಕೆದಾರರು ತಮ್ಮ ಅಗತ್ಯಕ್ಕೆ ಹೊಂದುವಂತೆ ಸಾಫ್ಟವೇರ್ ವೈಯಕ್ತಿಕಗೊಳಿಸಬಹುದು, ಇದರ ಮೂಲಕ ವೆಚ್ಚ-ಪರಿಣಾಮಕಾರಿ ಮತ್ತು ಸುಭದ್ರವಾಗಿರುವ ಅನುಕೂಲಕರ ಪರಿಹಾರಗಳನ್ನು ಒದಗಿಸುತ್ತದೆ. ಓಪನ್ ಸೊರ್ಸ್ ಸಂಪನ್ಮೂಲಗಳಲ್ಲಿ ಪ್ರವೇಶಿಸುವ ಮೂಲಕ ಲಾಭ-ರಹಿತ ಸಂಸ್ಥೆಗಳು (ನಾನ್‌ ಪ್ರಾಫಿಟ್| nonprofit) ತಮ್ಮ ಅನನ್ಯ ಅಗತ್ಯತೆಗಳಿಗೆ ತಕ್ಕಂತೆ, ದೀರ್ಘಕಾಲದ ಸುಸ್ಥಿರತೆ ಮತ್ತು ಸ್ವಾತಂತ್ರ್ಯವನ್ನು ಪೋಷಿಸುತ್ತಾ ಸಾಫ್ಟವೇರ್ (software) ಬಳಸಿಕೊಳ್ಳಬಹುದು. 

ಲಾಭ-ರಹಿತಗಳಿಗಾಗಿರುವ ಈ ಟುಟೋರಿಯಲ್ ನಲ್ಲಿ ಓಪನ್ ಸೋರ್ಸ್ ಪರಿಹಾರಗಳ ಕುರಿತು: 

  1. ಆಂತರಿಕ ಕಾರ್ಯಾಚರಣೆಗಳು ಮತ್ತು ಡೇಟಾ ನಿರ್ವಹಣೆಯನ್ನು ಸುಧಾರಿಸಲು ಓಪನ್ ಸೋರ್ಸ್ ಪರಿಹಾರಗಳು 
  2. ಓಪನ್ ಸೋರ್ಸ್ ತಂತ್ರಜ್ಞಾನ ಬಳಕೆಯ ನೈಜ ಅನುಭವವನ್ನು ವಿವರಿಸಲು ಪ್ರಕರಣ ಅಧ್ಯಯನಗಳು 
  3. ಲಾಭ-ರಹಿತ ಸಂಸ್ಥೆಗಳಿಗಾಗಿ ಸರಿಹೊಂದುವ ಪರಿಣಿತರ ಅಭಿಪ್ರಾಯಗಳು ಶಿಫಾರಸ್ಸಿನ ಓಪನ್ ಸೋರ್ಸ್ ಪರಿಹಾರಗಳು 

ಲಾಭ-ರಹಿತ ಸಂಸ್ಥೆಗಳು (ನಾನ್‌ ಪ್ರಾಫಿಟ್| nonprofit) ತನ್ನ ಕಾರ್ಯಾಚರಣೆ ಚಟುವಟಿಕೆಗಳಿಗಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಬಯಸುತ್ತಿರುವ ಯಾವುದೇ ಲಾಭ-ರಹಿತ ಸಂಸ್ಥೆಗಳಿಗಾಗಿ ಈ ಕೈಪಿಡಿಯನ್ನು ಶಿಫಾರಸ್ಸು ಮಾಡಲಾಗಿದೆ. 

ಕೈಪಿಡಿ ಸಾರಾಂಶ 

ಓಪನ್ ಸೋರ್ಸ್ ಪರಿಹಾರಗಳೊಂದಿಗೆ ಲಾಭ-ರಹಿತ ಸಂಸ್ಥೆಗಳಿಗೆ ಅಧಿಕಾರ ಕುರಿತಾಗಿನ ಈ ಸೆಷನ್ ಅಖಿಲಾ ಸೋಮೂನ ಮತ್ತು ಪ್ರವೀಣ್ ಕುಮಾರ್ ಸಿಂಗ್ ಅವರು ಪ್ರಸ್ತುತಪಡಿಸುತ್ತದೆ. ಲಾಭ-ರಹಿತ ಸಂಸ್ಥೆಗಳು (ನಾನ್‌ ಪ್ರಾಫಿಟ್| nonprofit) ತಮ್ಮ ಸಾಮರ್ಥ್ಯವನ್ನು ಸ್ಥಾಪಿಸುವಲ್ಲಿ ಮತ್ತು ಜವಾಬ್ದಾರಿಯನ್ನು ಪ್ರದ್ರಶಿಸುವಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತು ತಂತ್ರಜ್ಞಾನ ಹೇಗೆ ಅವರಿಗೆ ಸಹಾಯ ಮಾಡಬಹುದು ಎಂಬುವ ವಿಷಯವಾಗಿ ಅಖಿಲಾ ಚರ್ಚಿಸುತ್ತಾರೆ. ಅವರು ಆಂತರಿಕ ಸಾಮರ್ಥ್ಯವನ್ನು ನಿರ್ಮಿಸುವ ಪ್ರಾಮುಖ್ಯತೆ, ಬಳಕೆದಾರ-ಸ್ನೇಹಿ ಪರಿಕರಗಳನ್ನು ಆಯ್ಕೆಮಾಡುವುದು ಮತ್ತು ಲಾಭ-ರಹಿತ ಸಂಸ್ಥೆಗಳಿಗೆ ಒದಗಿಸಲಾಗುವ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವುದರ ಕುರಿತು ಒತ್ತು ನೀಡಿದರು. ಪ್ರವೀಣ್ ಓಪನ್ ಸೋರ್ಸ್ ಸಾಫ್ಟವೇರ್ ಪರಿಹಾರಗಳ ಅನುಕೂಲತೆ ಹಾಗೂ ನಿರ್ದಿಷ್ಟ ಸಾಂಸ್ಥಿಕ ಅಗತ್ಯತೆಗಳನ್ನು ಪೂರೈಸುವ ಸಾಮರ್ಥ್ಯವನ್ನು ಒತ್ತಿಹೇಳುವುದರೊಂದಿಗೆ ಅದರ ಸಾಮರ್ಥ್ಯಗಳನ್ನು ಚರ್ಚಿಸಿದರು. ಇದಲ್ಲದೆ ಅವರು ಓಪನ್-ಸೋರ್ಸ್ ಪರಿಹಾರಗಳಲ್ಲಿರುವ ತಾಂತ್ರಿಕ ಬೆಂಬಲ, ಸಂಕೀರ್ಣತೆ ಮತ್ತು ಸಂಭಾವ್ಯ ಸುರಕ್ಷತೆ ಸಮಸ್ಯೆಗಳು ರೀತಿಯ ಸವಾಲುಗಳನ್ನು ಸಹ ತಿಳಿಸಿದರು. ಅಂತಿಮವಾಗಿ ಲಾಭ-ರಹಿತ ವರ್ಗಕ್ಕಾಗಿ ನಿರ್ದಿಷ್ಟ ಮಾಹಿತಿಯನ್ನು ಒಳಗೊಂಡ ಒಂದು ಪ್ಲೇಬುಕ್ ಅನ್ನು ಪ್ರೆಸೆಂಟೇಷನ್ ಕೊಡುವುದರೊಂದಿಗೆ ಸೆಷನ್ ಮುಕ್ತಾಯಗೊಂಡಿತು. 


Please login or signup to view the resource.
Signup
ಓಪನ್-ಸೋರ್ಸ್-ಪರಿಹಾರಗಳೊಂದಿಗೆ-ಲಾಭ-ರಹಿತ-ಸಂಸ್ಥೆಗಳಿಗೆ-ಅಧಿಕಾರ.pdf
587 KB
ಓಪನ್-ಸೋರ್ಸ್ ಪರಿಹಾರಗಳೊಂದಿಗೆ ಲಾಭ-ರಹಿತ ಸಂಸ್ಥೆಗಳಿಗೆ ಅಧಿಕಾರ
1:11:50
Share your feedback!
Did you find our resources useful and relevant? We'd love to hear from you
0.0 rating
3
Views
0
Downloads
Related Resources