Fundraising / Fundraising Strategy and Planning

ನಿಧಿಸಂಗ್ರಹಣೆ ಯಶಸ್ಸಿನ ಕಥೆಗಳ ಉದಾಹರಣೆಗಳು

Best Practice
Basic IPN

ನಾವಿನ್ಯತೆ, ಸ್ಥಿತಿಸ್ಥಾಪಕತ್ವ, ಮತ್ತು ಪರಿಣಾಮವನ್ನು ಪ್ರದರ್ಶಿಸುವ ನಿಧಿಸಂಗ್ರಹಣೆಯ ಯಶಸ್ವಿ ಕಥೆಗಳನ್ನು ಕೇಳುವುದರಿಂದ ಮೌಲ್ಯಯುತ ಅವಲೋಕನಗಳು, ಸ್ಪೂರ್ತಿ, ಮತ್ತು ಪ್ರಾಯೋಗಿಕ ಕಾರ್ಯತಂತ್ರಗಳನ್ನು ಲಾಭ-ರಹಿತ ಸಂಸ್ಥೆಗಳು (ನಾನ್‌ ಪ್ರಾಫಿಟ್| nonprofit ) ಪಡೆಯಲು ಸಹಾಯಮಾಡುತ್ತದೆ ಮತ್ತು ಇದು ನಿಮ್ಮ ಸ್ವಂತ ನಿಧಿಸಂಗ್ರಹಣೆ ಪ್ರಯತ್ನಗಳನ್ನು ಹೆಚ್ಚಿಸಲು ಮತ್ತು ಧ್ಯೇಯ-ಉದ್ದೇಶಿತ ಗುರಿಗಳನ್ನು ಸಾಧಿಸಲು ಸಹ ಸಹಾಯಕವಾಗಿದೆ.  

ಈ ಕೈಪಿಡಿಯು ಭೂಮಿ, ಅನುಷ್ಕಾ ಫೌಂಡೇಶನ್ ಮತ್ತು ಸತ್ಯಾ ಸ್ಪೆಷಲ್ ಸ್ಕೂಲ್ ನಿಂದ 3 ಲಾಭ-ರಹಿತ ನಾಯಕರು ತಮ್ಮ ನಿಧಿಸಂಗ್ರಹಣೆ ಗುರಿಯನ್ನು ಸಾಧಿಸಲು ಮತ್ತು ತಮ್ಮ ಸಂಸ್ಥೆ ಬೆಳೆಯಲು ಸಹಾಯ ಮಾಡಿದಂತಹ ಅತ್ಯುತ್ತಮ ಅಭ್ಯಾಸಗಳನ್ನು  ಹಂಚಿಕೊಂಡ ಕಥೆಗಳನ್ನು ಒಳಗೊಂಡಿದೆ.  

ಈ ಕೈಪಿಡಿಯು ಲಾಭ-ರಹಿತ ನಾಯಕರಿಗಾಗಿ ನಿಧಿಸಂಗ್ರಹಣೆ ವೃತ್ತಿಪರರಿಗಾಗಿ ಮತ್ತು ತಮ್ಮ ನಿಧಿಸಂಗ್ರಹಣೆ ಗುರಿಯನ್ನು ಹೆಚ್ಚಿಸಲು ಬಯಸುತ್ತಿರುವ ನೈಜ-ಸಮಯದ ಕಲಿಕೆಗಳಿಗಾಗಿ ಎದುರು ನೋಡುತ್ತಿರುವ ಲಾಭ-ರಹಿತ ಸಂಸ್ಥೆಗಳಲ್ಲಿರುವ ಯಾವುದೇ ವ್ಯಕ್ತಿಗೆ ಶಿಫಾರಸ್ಸು ಮಾಡಲಾಗಿದೆ.  

ಕೈಪಿಡಿ ಸಾರಾಂಶ:

ಸೆಷನ್ ನಲ್ಲಿರುವ ಪ್ಯಾನೆಲಿಸ್ಟ್ ಗಳು ಹಣವನ್ನು ಹೇಗೆ ಸಂಗ್ರಹಿಸುವುದು, ಸಂಬಂಧವನ್ನು ನಿರ್ಮಿಸುವ ಪ್ರಾಮುಖ್ಯತೆ ಮತ್ತು ಸಾರ್ವಜನಿಕರಿಂದ ಬೆಂಬಲವನ್ನು ಪಡೆಯುವ ಕುರಿತು ಮಾತನಾಡಿದ್ದಾರೆ. ನಿರಂತರವಾಗಿ ಹಣವನ್ನು ಸಂಗ್ರಹಿಸಲು ಉದ್ದೇಶದ ಬಗ್ಗೆ ಕಾಳಜಿವಹಿಸುವ 

ಜನರೊಂದಿಗೆ ಸಂಪರ್ಕ ಸಾಧಿಸುವುದು ಮುಖ್ಯವಾಗಿದೆ. ಸ್ವಯಂಸೇವಕರನ್ನು ನಿರ್ವಹಿಸಲು ಮತ್ತು ನಿಧಿಸಂಗ್ರಹಣೆಯನ್ನು ಸುಲಭಗೊಳಿಸಲು ತಂತ್ರಜ್ಞಾನವನ್ನು ಬಳಸುವುದನ್ನು ಪ್ಯಾನೆಲಿಸ್ಟ್‌ಗಳು ಉಲ್ಲೇಖಿಸಿದ್ದಾರೆ. 

ಡೋನರ್ ಗಳು ಮತ್ತು ಬೆಂಬಲಿಗರ ಆಸಕ್ತಿಯನ್ನು ಪಡೆಯಲು ಕಥೆ ನಿರೂಪಣೆ ಬಹಳ ಮುಖ್ಯ. ದೊಡ್ಡ ಸಂಸ್ಥೆಗಳೊಂದಿಗೆ ಅಥವಾ ಸಣ್ಣ ಡೋನರ್ ಗಳೊಂದಿಗೆ ಮಾತಾಡುವುದಾಗಲೀ, ಕಥೆ ನಿರೂಪಣೆಯು ವ್ಯಕ್ತಿಯ ಗಮನವನ್ನು ಸೆಳೆಯುತ್ತದೆ. ಜೊತೆಗೆ ಉದ್ದೇಶಿಸಿರುವ ಅಗತ್ಯಗಳನ್ನು ಮತ್ತು ಸ್ಥಳಕ್ಕೆ ಸೂಕ್ತವಾಗಿ ಹೊಂದುವುದನ್ನು ಖಾತ್ರಿಪಡಿಸಲು ನಿಧಿಸಂಗ್ರಹಣೆ ಪ್ರಸ್ತಾವನೆಗಳು( ಪ್ರಪೋಸಲ್ | Proposal) ಸೃಜನಾತ್ಮಕ ಮತ್ತು ನಿರ್ದಿಷ್ಟವಾಗಿರಬೇಕು.  

ಗೌರವಾನ್ವಿತ ಜನರೊಂದಿಗೆ ಮತ್ತು ಗುಂಪುಗಳೊಂದಿಗೆ ಕೆಲಸಮಾಡುವುದರಿಂದ ಅವರ ಸಂಪರ್ಕಗಳು ಮತ್ತು ವಿಶ್ವಾಸಾರ್ಹತೆಯನ್ನು ಬಳಸುವ ಮೂಲಕ ನಿಧಿಸಂಗ್ರಹಣೆ ಪ್ರಯತ್ನಗಳನ್ನು ಹೆಚ್ಚಿಸಲು ಸಹಾಯವಾಗುತ್ತದೆ. ನಿಧಿಸಂಗ್ರಹಣೆ ಪ್ರಯತ್ನಗಳು ನಿಜಕ್ಕೂ ಹೇಗೆ ಬದಲಾವಣೆ ತರಬಲ್ಲದು ಎಂದು ಡೋನರ್ ಗೆ ತೋರಿಸುವುದು ಸಹ ನಂಬಿಕೆಯನ್ನು ಬೆಳೆಸಲು ಬಹಳ ಮುಖ್ಯವಾಗಿದೆ.  

ಹೆಚ್ಚಿನ ಬೆಂಬಲವನ್ನು ಪಡೆಯಲು ನಿಧಿಸಂಗ್ರಹಣೆ ಚಟುವಟಿಕೆಯಲ್ಲಿ ತಂಡದ ಪ್ರತಿಯೊಬ್ಬರೂ ಪಾಲ್ಗೊಳ್ಳುವುದನ್ನು ಸಲಹೆ ನೀಡಲಾಗಿದೆ. ನಿಧಿಸಂಗ್ರಹಣೆಯನ್ನು ಹೆಚ್ಚು ಯಶಸ್ವಿಯಾಗಿಸಲು ಒಟ್ಟಾಗಿ ಕೆಲಸ ಮಾಡುವುದರಿಂದ ಹೆಚ್ಚಿನ ಸಂಪನ್ಮೂಲಗಳು ಮತ್ತು ಕೌಶಲ್ಯಗಳನ್ನು ಸಂಸ್ಥೆಗಳು ಬಳಸಿಕೊಳ್ಳಬಹುದು.  

ಒಟ್ಟಾರೆಯಾಗಿ, ಈ ಸೆಷನ್ ಗಳು ನಿಧಿ ಸಂಗ್ರಹಣೆ( ಫಂಡ್‌ರೈಸಿಂಗ್ | Fundraising)  ಕುರಿತು ಸಾಕಷ್ಟು ಒಳ್ಳೆಯ ವಿಷಯಗಳನ್ನು ಬಿಚ್ಚಿಟ್ಟಿತು, ಜೊತೆಗೆ ತಂತ್ರಜ್ಞಾನ, ಕಥೆನಿರೂಪಣೆ, ಒಟ್ಟಾಗಿ ಕೆಲಸಮಾಡುವ ಮೂಲಕ ಮತ್ತು ನಿಧಿಸಂಗ್ರಹಣೆ ಪ್ರಯತ್ನಗಳ ಪರಿಣಾಮವನ್ನು ತೋರಿಸುವ ಮೂಲಕ ಸಾಧ್ಯವಿರುವ ಹೆಚ್ಚಿನ ಹಣವನ್ನು ಪಡೆಯಬಹುದಾಗಿದೆ.  


Please login or signup to view the resource.
Signup
ನಿಧಿಸಂಗ್ರಹಣೆ ಯಶಸ್ಸಿನ ಕಥೆಗಳ ಉದಾಹರಣೆಗಳು
1:40:36
Share your feedback!
Did you find our resources useful and relevant? We'd love to hear from you
0.0 rating
0
Views
0
Downloads
Related Resources