Fundraising / Fundraising Strategy and Planning

ನಿಧಿಸಂಗ್ರಹಣೆಯನ್ನು ಹೇಗೆ ಮಾಡುವುದು

Tutorial
Basic The Nudge Institute

ನಿಧಿಸಂಗ್ರಹಣೆ ಕಾರ್ಯತಂತ್ರವು ಲಾಭ-ರಹಿತ ಸಂಸ್ಥೆಗಳಿಗೆ ಪ್ರಮುಖವಾಗಿದೆ ಏಕೆಂದರೆ ಇದು ಹಣಕಾಸಿನ ಸುಸ್ಥಿರತೆಯನ್ನು ಖಾತ್ರಿಪಡಿಸಿಕೊಳ್ಳುತ್ತದೆ, ಯೋಜನೆಗಳನ್ನು ವಿಸ್ತರಿಸುತ್ತದೆ, ಸವಾಲುಗಳಿಗೆ ಹೊಂದಿಕೊಳ್ಳುತ್ತದೆ ಮತ್ತು ಸಾಂಸ್ಥಿಕ ಬೆಳವಣಿಗೆಯನ್ನು ವೃದ್ಧಿಸುತ್ತದೆ. ಒಂದು ಸಂಸ್ಥೆಯು ಗುರಿಗಳು ಮತ್ತು ಉದ್ದೇಶಿತ ಪ್ರೇಕ್ಷರನ್ನು ಅರ್ಥಮಾಡಿಕೊಳ್ಳುವುದು, ವೈವಿಧ್ಯಮಯ ಆದಾಯ ಮಾರ್ಗಗಳನ್ನು ಅಭಿವೃದ್ಧಿಪಡಿಸುವುದು, ಡೋನರ್ ಜೊತೆಗಿನ ಸಂಪರ್ಕ ನಿರ್ಮಿಸುವುದು, ತಂತ್ರಜ್ಞಾನವನ್ನು ಉಪಯೋಗಿಸುವುದು ಮತ್ತು ತನ್ನ ನಿಧಿಸಂಗ್ರಹಣೆ ಗುರಿಗಳನ್ನು ಸಮರ್ಥವಾಗಿ ಸಾಧಿಸಲು ಮತ್ತು ಕಾಯತಂತ್ರಗಳನ್ನು ಗರಿಷ್ಠಗೊಳಿಸಲು ಕೆಲಸಗಳನ್ನು ನಿಗಾವಣೆ ಮಾಡುವುದರ ಮೂಲಕ ನಿಧಿಸಂಗ್ರಹಣೆ ಪ್ರಕ್ರಿಯೆಯನ್ನು ಆರಂಭಿಸಬಹುದು.

 

ಈ ಟ್ಯುಟೋರಿಯಲ್ ನಿಧಿಸಂಗ್ರಹಣೆಯ ಮೂರು ಪ್ರಮುಖ ಅಂಶಗಳನ್ನು ಅರ್ಥಮಾಡಿಕೊಳ್ಳಲು ಸಂಸ್ಥೆಗಳಿಗೆ ಸಹಾಯಮಾಡುತ್ತದೆ: 

  1. ಬಲವಾದ ಹೂಡಿಕೆ ಯೋಜನೆಯನ್ನು ನಿರ್ಮಿಸುವುದು 
  2. ಡೋನರ್ ಪರಿಚಯ ಮತ್ತು ಸಂಬಂಧ ನಿರ್ಮಾಣ 
  3. ಡೋನರ್ ಉಳಿಸಿಕೊಳ್ಳುವುದು 

ಈ ಕೈಪಿಡಿಯು ಲಾಭ-ರಹಿತ ನಾಯಕರಿಗೆ ಅಥವಾ ನಿಧಿಸಂಗ್ರಹಣೆ ಉದ್ಯೋಗಿಗಳಿಗೆ ಶಿಫಾರಸ್ಸು ಮಾಡಲಾಗಿದೆ. 

ಕೈಪಿಡಿ ಸಾರಾಂಶ: 

ಲಾಭ-ರಹಿತ ಸಂಸ್ಥೆಗಳ ಜಗತ್ತಿನಲ್ಲಿ, ಪರಿಣಾಮವನ್ನು ಪ್ರದರ್ಶಿಸಲು ಮತ್ತು ಡೋನರ್ ಗಳನ್ನು ಸೆಳೆಯಲು ಪರಿಣಾಮಕಾರಿ ಮಾರ್ಕೆಟಿಂಗ್ ಮತ್ತು ನಿಧಿಸಂಗ್ರಹಣೆ ಸಂವಹನವು ಬಹಳ ಮುಖ್ಯ. ಮಂಡಳಿ ಸದಸ್ಯರ ವಿಶ್ವಾಸಾರ್ಹತೆಯನ್ನು ಮತ್ತು ನಾಯಕತ್ವವನ್ನು ನಿಯಂತ್ರಿಸುವುದು ಬಲವಾದ ಮಾರಾಟ ಅಂಶಗಳಾಗಿ ಕಾರ್ಯನಿರ್ವಹಿಸುತ್ತವೆ. ಸಾಮಾಜಿಕ  ಮಾಧ್ಯಮ, ವೆಬ್ಸೈಟ್ ಗಳು, ಮತ್ತು ಸ್ಪಷ್ಟ ಕಿರು ಸಂದೇಶಗಳ ಮೂಲಕ ನಡೆಸುವ ನಿರಂತರ ಸಂಪರ್ಕವು ಭಾಗವಹಿಸುವ ಡೋನರ್ ಗಳಿಗಾಗಿ ಬಹಳ ನಿರ್ಣಾಯಕವಾಗಿದೆ. ಈ ಸೆಷನ್ ಡೋನರ್ ಬುದ್ದಿವಂತಿಕೆ, ಪ್ರಸ್ತಾವನೆ ( ಪ್ರಪೋಸಲ್ | Proposal)ಬರವಣಿಗೆ, ಮತ್ತು ಸ್ವಯಂಚಾಲಿತ ಮೇಲರ್ ರೀತಿಯ ಸಂವಹನ ವಿಧಾನಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಇನ್ನು ಉದ್ಯಯೋನ್ಮುಖ ಸಂಸ್ಥೆಗಳಿಗಾಗಿ, ವೈವಿಧ್ಯಮ ಕೌಶಲ್ಯಗಳುಳ್ಳ ದ್ವಿ-ಸದಸ್ಯರ ನಿಧಿ ಸಂಗ್ರಹಣೆ( ಫಂಡ್‌ರೈಸಿಂಗ್ | Fundraising)  ತಂಡವನ್ನು ರಚಿಸುವುದನ್ನು ಶಿಫಾರಸ್ಸು ಮಾಡಲಾಗಿದೆ. ಲಿಂಕ್ಡ್ಇನ್ ರೀತಿಯ ಪ್ಲಾಟ್ಫಾರ್ಮ್ ಗಳ ಮೇಲೆ ಸಂಭಾವ್ಯ ಡೋನರ್ ಗಳನ್ನು ಹುಡುಕುವುದು ಮತ್ತು ಅನುದಾನವನ್ನು ಪಡೆಯುವ ಮೊದಲು ಸಂಬಂಧಗಳನ್ನು ಬೆಸೆಯುವುದನ್ನು ಸಲಹೆ ನೀಡಲಾಗಿದೆ. ಕಾರ್ಪೊರೇಟ್ ಪಾಲುದಾರರೊಂದಿಗೆ( ಪಾರ್ಟ್ನರ್ | Partner) ವರದಿ ನಿರೀಕ್ಷೆಗಳನ್ನು ಕುರಿತು ಸ್ಪಷ್ಟ ಮಾತುಕತೆಯೊಂದಿಗೆ ಸ್ವಯಂಚಾಲಿತ ವರದಿ ಉತ್ಪಾದನೆಯು ಪ್ರಕ್ರಿಯೆಯನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಮತ್ತು ಸಮಯ ನಿರ್ವಹಣೆಯನ್ನು ಗರಿಷ್ಠಗೊಳಿಸಲು ಸಹಾಯಮಾಡುತ್ತದೆ. ಇದು ಭಾಗವಹಿಸುವ HNI ಡೋನರ್ ಗಳಿಗೆ ಸಲಹೆ ನೀಡುವುದರೊಂದಿಗೆ ಫೌಂಡೇಶನ್ ಗಳು, ಕಾರ್ಪೊರೇಟ್ ಗಳು, ಮತ್ತು HNIಗಳಿಗಾಗಿ ಅನುದಾನ ನೀಡುವ ಕಾಲಾವಕಾಶವನ್ನು ಪರಿಶೀಲಿಸುತ್ತದೆ.


Please login or signup to view the resource.
Signup
ನಿಧಿಸಂಗ್ರಹಣೆಯನ್ನು ಹೇಗೆ ಮಾಡುವುದು?
2:11:56
Share your feedback!
Did you find our resources useful and relevant? We'd love to hear from you
0.0 rating
0
Views
0
Downloads
Related Resources