Human Resources (HR) / Talent Attraction and Recruitment

ಸ್ವಯಂ-ಸೇವಕರೊಂದಿಗೆ ಪರಿಣಾಮಕಾರಿ ಸಂಬಂಧವನ್ನು ಹೇಗೆ ಬೆಳೆಸುವುದು

Tutorial
Basic Teach for India

ಸ್ವಯಂ-ಸೇವಕರು ಲಾಭ-ರಹಿತ ಸಂಸ್ಥೆಗಳಿಗೆ  ಹೆಚ್ಚುವರಿ ಮಾನವಸಂಪನ್ಮೂಲಗಳು, ವೈವಿಧ್ಯಮಯ ಕೌಶಲ್ಯಗಳು ಮತ್ತು ಸಮುದಾಯದ ಸಂಪರ್ಕಗಳನ್ನು ನೀಡುತ್ತವೆ. ಇವರು ಸಿಬ್ಬಂದಿಗಳನ್ನು ನಿಯೋಜಿಸುವ ಸಂಸ್ಥೆಯ ಖರ್ಚುಗಳನ್ನು ಉಳಿಸುವುದರೊಂದಿಗೆ ಸಂಸ್ಥೆಯ ಪರಿಣಾಮ ಮತ್ತು ಸಂಪರ್ಕವನ್ನು ಹೆಚ್ಚಿಸುತ್ತದೆ. ಉತ್ತಮ ಸ್ವಯಂ-ಸೇವಕರ ಗುಂಪು ಇದ್ದರೆ ಲಾಭ-ರಹಿತ ಸಂಸ್ಥೆಗಳಿಗೆ ಅನೇಕ ಪ್ರಯೋಜನಗಳು ಇರುತ್ತವೆ.  

ಪ್ರಾಯೋಗಿಕ ಉದಾಹರಣೆಗಳು ಮತ್ತು ಪ್ರಕರಣ ಅಧ್ಯಯನಗಳ ಮೂಲಕ ಈ ಟ್ಯುಟೋರಿಯಲ್ ನಿಮಗೆ ಈ ಕೆಳಗಿನವುಗಳ ಒಂದು ಅವಲೋಕನವನ್ನು ನೀಡುತ್ತದೆ:  

  1. ಪರಿಣಾಮಕಾರಿ ಸ್ವಯಂ-ಸೇವಕರ ಯೋಜನೆಯನ್ನು ಹೇಗೆ ವಿನ್ಯಾಸಗೊಳಿಸುವುದು  
  2. ಸ್ವಯಂ-ಸೇವೆ ಪಯಣದ 4 ಹಂತಗಳು - ನೇಮಕಾತಿ, ಹೋಲಿಸಿ ನೋಡಿ, ತೊಡಗಿಸಿಕೊಳ್ಳುವುದು ಮತ್ತು ಮೌಲ್ಯಮಾಪನ  

ಈ ಕೈಪಿಡಿಯು ಸಂಸ್ಥೆಯ ನಾಯಕರು, ಜನರ ತಂಡ ಅಥವಾ ಸ್ವಯಂ-ಸೇವಕರ ಜಾಲವನ್ನು ರಚಿಸುವ ಮತ್ತು ನಿರ್ವಹಣೆ ಮಾಡುವ ಕೆಲಸದಲ್ಲಿ ತೊಡಗಿರುವ ಯಾವುದೇ ಇತರ ತಂಡಗಳಿಗಾಗಿ ಶಿಫಾರಸ್ಸು ಮಾಡಲಾಗಿದೆ.  

ಕೈಪಿಡಿ ಸಾರಾಂಶ:

ಈ ಸೆಷನ್ ಆನ್ಲೈನ್, ಆಫ್ಲೈನ್, ಮತ್ತು ಹೈಬ್ರಿಡ್(ಎರಡೂ ಮಿಶ್ರ) ವಿಧಾನಗಳನ್ನೂ ಒಳಗೊಂಡಂತೆ ಅನೇಕ ವಿಧಗಳ ಸ್ವಯಂಸೇವೆ ವಿವರಗಳನ್ನು ನೀಡಿತು. ಸ್ವಯಂ-ಸೇವಕರಿಗಾಗಿ ಅರ್ಥಪೂರ್ಣ ಅನುಭವಗಳನ್ನು ಖಾತ್ರಿಪಡಿಸಲು ಸ್ವಯಂ-ಸೇವಕ ಕಾರ್ಯಕ್ರಮಗಳಲ್ಲಿ ನಾಯಕತ್ವದ ಪಯಣವನ್ನು ಅರ್ಥಮಾಡಿಕೊಳ್ಳುವುದು ಮತ್ತು ತೊಡಗಿಸಿಕೊಳ್ಳುವಿಕೆ ಅನುಭವಗಳನ್ನು ವಿನ್ಯಾಸಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುವುದು ಬಹಳ ಮುಖ್ಯವಾಗಿದೆ. ಸ್ಪಷ್ಟ ನಿರೀಕ್ಷೆಗಳು ಮತ್ತು ತೊಡಗಿಸಿಕೊಳ್ಳುವಿಕೆಯ ಸಮಯವನ್ನು ನೀಡುವುದರೊಂದಿಗೆ ಸ್ವಯಂ-ಸೇವಕರ ಬದ್ಧತೆ ಮತ್ತು ಕಾರ್ಯಕ್ರಮದ ಅನುಷ್ಠಾನದಲ್ಲಿನ ಸಮಸ್ಯೆಗಳ ಕುರಿತು ಕಾರ್ಯತಂತ್ರಗಳನ್ನು ಚರ್ಚಿಸಲಾಯಿತು. ಭವಿಷ್ಯದ ಸಂಭಾವ್ಯ ಅನುದಾನಕ್ಕಾಗಿ ಕಾರ್ಪೊರೇಟ್ ಸ್ವಯಂ-ಸೇವಕರು ರೀತಿಯ ಸ್ವಯಂ-ಸೇವಕ ನೇಮಕಾತಿಗಾಗಿ ನಿರ್ದಿಷ್ಟ ಗುಂಪುಗಳನ್ನು ಗುರಿಮಾಡುವುದು ಮುಖ್ಯ ಎಂದು ಪರಿಗಣಿಸಲಾಯಿತು. ಗುರಿ  ಯಶಸ್ವಿಯಾಗುವುದಕ್ಕಾಗಿ ಸ್ವಯಂ-ಸೇವಕರನ್ನು ಸೇರಿಸವುದನ್ನು ಉತ್ತೇಜಿಸುವುದು ಮತ್ತು ಸಮುದಾಯದ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮುಖ್ಯತೆಯ ಕುರಿತು ಸೆಷನ್ ನಲ್ಲಿ ಒತ್ತುನೀಡಲಾಯಿತು.   

ಒಟ್ಟಾರೆಯಾಗಿ, ಸೆಷನ್ ಕಾರ್ಯತಾಂತ್ರಿಕ ನೇಮಕಾತಿ, ತೊಡಗಿಸಿಕೊಳ್ಳುವಿಕೆ, ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ ಸ್ವಯಂ-ಸೇವಕ ನಿರ್ವಹಣೆಯಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಸಾಂಸ್ಥಿಕ ಗುರಿಗಳೊಂದಿಗೆ ಮತ್ತು ಸಮುದಾಯದ ಅಗತ್ಯತೆಗಳೊಂದಿಗೆ ಸ್ವಯಂ-ಸೇವಕರ ಅನುಭವವನ್ನು ಜೋಡಿಸುವ ಮೂಲಕ ಧನಾತ್ಮಕ ಪರಿಣಾಮ ಮತ್ತು ಸುಸ್ಥಿರ ತೊಡಗಿಸಿಕೊಳ್ಳುವಿಕೆಯನ್ನು ಬೆಂಬಲಿಸುವ ಪರಸ್ಪರ ಪ್ರಯೋಜನಕಾರಿ ಸಂಬಂಧವನ್ನು ಸ್ಥಾಪಿಸುವುದು ಮುಖ್ಯ ಉದ್ದೇಶವಾಗಿದೆ. ಅಂತಿಮವಾಗಿ ಸೆಷನ್ ಅರ್ಥಪೂರ್ಣ ಅನುಭವಗಳನ್ನು ಮತ್ತು ಸಮುದಾಯದಲ್ಲಿ ಶಾಶ್ವತವಾದ ಪ್ರಭಾವವನ್ನು ಖಚಿತಪಡಿಸಿಕೊಳ್ಳಲು ಸ್ವಯಂಸೇವಕ ಕಾರ್ಯಕ್ರಮಗಳಲ್ಲಿ ಪೂರ್ವಭಾವಿ ವಿನ್ಯಾಸ ನಿರ್ಧಾರಗಳ ಕರೆಯೊಂದಿಗೆ ಮುಕ್ತಾಯಗೊಂಡಿತು.  


Please login or signup to view the resource.
Signup
ಸ್ವಯಂ-ಸೇವಕರೊಂದಿಗೆ-ಪರಿಣಾಮಕಾರಿ-ಸಂಬಂಧವನ್ನು-ಹೇಗೆ-ಬೆಳೆಸುವುದು.pdf
326 KB
ಸ್ವಯಂ-ಸೇವಕರೊಂದಿಗೆ ಪರಿಣಾಮಕಾರಿ ಸಂಬಂಧವನ್ನು ಹೇಗೆ ಬೆಳೆಸುವುದು
1:18:11
Share your feedback!
Did you find our resources useful and relevant? We'd love to hear from you
0.0 rating
1
Views
0
Downloads
Related Resources
Human Resources (HR) / Talent Attraction and Recruitment
Basic IPN
Human Resources (HR) / Talent Attraction and Recruitment
Basic Educate Girls