ಸಾಮಾಜಿಕ ಮಾಧ್ಯಮ ಕ್ಯಾಲೆಂಡರ್ ಹೇಗೆ ವಿನ್ಯಾಸಗೊಳಿಸುವುದು
ಸಾಮಾಜಿಕ ಮಾಧ್ಯಮವು ತನ್ನ ಪ್ರೇಕ್ಷಕರೊಂದಿಗೆ ದೊಡ್ಡ ಪ್ರಮಾಣದಲ್ಲಿ ಮತ್ತು ಸೀಮಿತ ದರದಲ್ಲಿ ನೇರವಾಗಿ ಸಂಪರ್ಕಗೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಇದು ಆರ್ಗನೈಸೇಶನ್ ಗಳು ತಮ್ಮ ಬ್ರ್ಯಾಂಡ್ ಗುರುತು ಪ್ರದರ್ಶಿಸಲು, ಪ್ರಭಾವಕಾರಿ ಕಂಟೆಂಟ್ ಹಂಚಿಕೊಳ್ಳಲು ಮತ್ತು ರಿಯಲ್-ಟೈಮ್ ನಲ್ಲಿ ಫಾಲೋವರ್ಸ್ ನೊಂದಿಗೆ ಸಂಪರ್ಕಿಸಲು ಸಾಧ್ಯವಾಗಿಸುತ್ತದೆ. ಒಂದು ನಿರಂತರ ಸಾಮಾಜಿಕ ಮಾಧ್ಯಮ ಸಂವಹನವು ನಿಯಮಿತವಾಗಿ ಕಂಟೆಂಟ್, ಅಪಡೇಟ್ ಗಳು ಮತ್ತು ಕಥೆಗಳನ್ನು ನಿಮ್ಮ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುವುದು ಒಳಗೊಂಡಿರುತ್ತದೆ ಮತ್ತು ಇದು ಬ್ರ್ಯಾಂಡ್ ಗೋಚರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಸಾಮಾಜಿಕ ಮಾಧ್ಯಮ ಕ್ಯಾಲೆಂಡರ್ ಪಾಲುದಾರರೊಂದಿಗೆ ( ಪಾರ್ಟ್ನರ್ | Partner) ನಿರಂತರ ಮತ್ತು ಕಾರ್ಯತಾಂತ್ರಿಕ ಸಂಪರ್ಕವನ್ನು ಖಾತ್ರಿಪಡಿಸಿಕೊಳ್ಳುತ್ತಾ ಪ್ಲಾನಿಂಗ್ ಮತ್ತು ನಿಗದಿತ ಕಂಟೆಂಟ್ ಗಾಗಿ ಒಂದು ಮಾದರಿಯ ಚೌಕಟ್ಟನ್ನು ನೀಡುತ್ತದೆ. ನಾನ್-ಪ್ರಾಫಿಟ್ ಗಳಿಗೆ ಈ ಟೆಂಪ್ಲೇಟ್ ಇದನ್ನು ಒದಗಿಸುತ್ತದೆ:
- ವಿಭಿನ್ನ ಪಾಲುದಾರರನ್ನು( ಪಾರ್ಟ್ನರ್ | Partner) ಗುರಿಯಾಗಿಸಿಕೊಂಡು ಮಾಸಿಕ ಸಾಮಾಜಿಕ ಮಾಧ್ಯಮ ಸಂವಹನ ಪ್ಲಾನ್ ತಯಾರಿಸಲು “ಸಾಮಾಜಿಕ ಮಾಧ್ಯಮ ಕ್ಯಾಲೆಂಡರ್ ಪ್ಲಾನ್” ಬಳಸಬಹುದು
- ಈ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳ ಸ್ಥಿತಿಗತಿ ಮತ್ತು ಪರಿಣಾಮಕಾರಿತ್ವವನ್ನು ಟ್ರ್ಯಾಕ್ ಮಾಡಲು “ಸಾಮಾಜಿಕ ಮಾಧ್ಯಮ ಟ್ರ್ಯಾಕರ್” ಬಳಸಬಹುದು
ಈ ಸಂಪನ್ಮೂಲವನ್ನು ನಾನ್-ಪ್ರಾಫಿಟ್ ನಲ್ಲಿರುವ ಎಲ್ಲಾ ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕರು ಮತ್ತು ಸಂವಹನ ಸ್ಪೆಷಲಿಸ್ಟ್ ಗಳಿಗೆ ಶಿಫಾರಸ್ಸು ಮಾಡಲಾಗಿದೆ.
ಗಮನಿಸಿ: ಇದೊಂದು ಟೆಂಪ್ಲೇಟ್ ಮಾತ್ರ ಆಗಿದೆ. ನೀವು ನಿಮ್ಮ ಆರ್ಗನೈಸೇಶನ್ ನ ಅಗತ್ಯತೆಗಳಿಗೆ ಅನುಗುಣವಾಗಿ ನಿಮ್ಮ ವಿಧಾನವನ್ನು ಬದಲಿಸಿಕೊಳ್ಳಬೇಕೆಂದು ನಾವು ನಿಮಗೆ ಸಲಹೆ ನೀಡುತ್ತೇವೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಸಹಾಯ ಬೇಕಿದ್ದರೂ ನಾವು ನಿಮಗೆ ಮಾಡುತ್ತೇವೆ. ಯಾವುದೇ ಸಂದೇಹಗಳಿಗಾಗಿ ipn@indiapartnernetwork.org ಗೆ ಸಂಪರ್ಕಿಸಿ.