Program Design and Delivery / Monitoring & Evaluation

ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ (monitoring | ಮಾನಿಟರಿಂಗ್ & evaluation | ಎವಲ್ಯೂಯೇಷನ್ ) ವ್ಯವಸ್ಥೆಗಳಲ್ಲಿ ಡೇಟಾ (Data) ಬಲಪಡಿಸುವುದು

Tutorial
Intermediate Sattva Consulting

ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ (M&E) ವ್ಯವಸ್ಥೆಗಳು ಆರ್ಗನೈಸೇಶನ್ ನಲ್ಲಿ ಬಹಳ ನಿರ್ಣಾಯಕ ಏಕೆಂದರೆ ಇವು ಯೋಜನೆಗಳು ಮತ್ತು ಉಪಕ್ರಮಗಳ (ಪ್ರೊಗ್ರಮ್ಸ್ | programs) ಪರಿಣಾಮಕಾರಿತ್ವ ಮತ್ತು ಪ್ರಭಾವದ ಮೇಲೆ ಅವಲೋಕನಗಳನ್ನು ಒದಗಿಸುತ್ತದೆ. ಇವು ಆರ್ಗನೈಸೇಶನ್ ಗಳಿಗೆ ಮಾಹಿತಿಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು, ಸಂಪನ್ಮೂಲಗಳನ್ನು ಯಶಸ್ವಿಯಾಗಿ ನಿಯೋಜಿಸಲು ಮತ್ತು ತಮ್ಮ ಗುರಿಗಳನ್ನು ಅಗತ್ಯಕ್ಕೆ ತಕ್ಕಂತೆ ಕಾರ್ಯತಂತ್ರಗಳನ್ನು ಹೊಂದಿಸಲು ಸಹಾಯ ಮಾಡುತ್ತದೆ.  

M&Eನಲ್ಲಿ ಡೇಟಾ ಪಾತ್ರ ಬಹಳ ಮೂಲಭೂತವಾದದ್ದು. ಡೇಟಾ ಯೋಜನೆ ಪರಿಣಾಮಕಾರಿತ್ವ ಮೌಲ್ಯಮಾಪನ ಮಾಡಲು, ಉದ್ದೇಶಗಳ ಕುರಿತು ಪ್ರಗತಿಯನ್ನು ಅಳತೆ ಮಾಡಲು ಮತ್ತು ಸುಧಾರಣೆಗಾಗಿ ಕ್ಷೇತ್ರಗಳನ್ನು ಗುರುತಿಸಲು ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ. ಇದು ಸಾಕ್ಷಿ-ಆಧಾರಿತ ನಿರ್ಧಾರಗಳನ್ನು ಕೈಗೊಳ್ಳಲು, ಫಲಿತಾಂಶಗಳ ಮೇಲೆ ನಿಗಾವಣೆ ಮಾಡಲು ಮತ್ತು ಕಾರ್ಯಕ್ರಮಗಳ (ಇಂಟರ್ವೆನಂತಿಒಂಸ್  | interventions) ಪ್ರಭಾವವನ್ನು ಪ್ರದರ್ಶಿಸಲು M&E ವೃತ್ತಿಪರರಿಗೆ ಮಾಹಿತಿಯನ್ನು ಸಂಗ್ರಹಿಸಲು, ವಿಶ್ಲೇಷಿಸಲು ಮತ್ತು ಅರ್ಥ ತಿಳಿಯಲು ಅವಕಾಶ ನೀಡುತ್ತದೆ. ಆರ್ಗನೈಸೇಶನ್ ಗಳು ಭವಿಷ್ಯದ ಯೋಜನೆಯ ಬಗ್ಗೆ ತಿಳಿಸಲು ಮತ್ತು ಯೋಜನೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಇತ್ತೀಚಿನ ಪ್ರವೃತ್ತಿಗಳು, ಮಾದರಿಗಳು ಮತ್ತು ಸಂಬಂಧಗಳನ್ನು ಗುರುತಿಸಲು ಡೇಟಾ ಅನುವುಗೊಳಿಸುತ್ತದೆ. 

ಈ ಟ್ಯುಟೋರಿಯಲ್ ನಿಮಗೆ ಈ ಕೆಳಗಿನ ವಿಷಯಗಳ ಮೇಲೆ ತಿಳಿವಳಿಕೆಯನ್ನು ನೀಡುತ್ತದೆ: 

  1. M&E ಏಕೆ ಮುಖ್ಯವಾಗಿದೆ 
  2. ಸಾಕ್ಷಿ-ಆಧಾರಿತ ಯೋಜನೆಯ ನಿರ್ಧಾರಗಳನ್ನು ಮಾಡಲು M&E ಸಾಧನಗಳನ್ನು ಹೇಗೆ ಬಳಸಬಹುದು 
  3. ಆರ್ಗನೈಸೇಶನ್ ನಲ್ಲಿ M&E ಸಂಸ್ಕೃತಿಯನ್ನು ಹೇಗೆ ಬೆಳೆಸುವುದು 

ಈ ಸಂಪನ್ಮೂಲವು ಆರ್ಗನೈಸೇಶನ್ ನಲ್ಲಿರುವ ಯೋಜನೆ ವ್ಯವಸ್ಥಾಪಕರು, ಯೋಜನೆ ತಂಡ ಮತ್ತು M&E ವ್ಯವಸ್ಥಾಪಕರಿಗಾಗಿ ಶಿಫಾರಸ್ಸು ಮಾಡಲಾಗಿದೆ. 

ಸಂಪನ್ಮೂಲ ಸಾರಾಂಶ (ಸಮ್ಮರಿ | Summary): 

ವಿಷಯಗಳು ಯಾವ ರೀತಿಯಾಗಿ ನಡೆಯುತ್ತಿವೆ ಮತ್ತು ಅವು ಪ್ರಗತಿಯನ್ನು ಸಾಧಿಸುತ್ತಿದೆಯೇ ಎಂಬುದರ ಮೇಲೆ ಆರ್ಗನೈಸೇಶನ್ ಗಮನವಿಡುವುದು, ಏಕೆ ಮುಖ್ಯ ಎನ್ನುವ ಕುರಿತು ಸೆಷನ್ ನಲ್ಲಿ ಚರ್ಚಿಸಲಾಗಿದೆ. ಸೆಷನ್ ಸ್ಪೀಕರ್ ಆಗಿದ್ದ, ಸತ್ವ ಸಂಸ್ಥೆಯ ರಿಚಾ ಶಿವ್ ಹರೆ ಅವರು ಮಾತನಾಡಿ ಪ್ರಗತಿಯನ್ನು ಪರಿಣಾಮಕಾರಿಯಾಗಿ ಅಳತೆ ಮಾಡಲು ಗುರಿಗಳನ್ನು ರಚಿಸುವುದರ ಬಗ್ಗೆ ಮತ್ತು ಡೇಟಾ ಸಂಗ್ರಹಣೆಯಲ್ಲಿ ಮತ್ತು ಡೇಟಾ ನೋಡುವಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ತಿಳಿದಿರಬೇಕು ಎಂದು ಹೇಳಿದರು. ಅವರು ಆರ್ಗನೈಸೇಶನ್ ನೊಳಗೆ ಆಂತರಿಕ ಪರಿಶೀಲನೆ ನಡೆಸುವುದು ಮತ್ತು ಹೊರಗಿನಿಂದ ಪ್ರತಿಕ್ರಿಯೆಯನ್ನು ಪಡೆಯುವುದು ರೀತಿಯಾಗಿ ಸಾಧನೆಯ ಪ್ರಗತಿಯನ್ನು ನೋಡಲು ವಿವಿಧ ವಿಧಾನಗಳ ಬಗ್ಗೆಯೂ ಸಹ ವಿವರಿಸಿದರು. 

ಅವರು ನಿರ್ಧಾರಗಳನ್ನು ತೆಗೆದುಕೊಳ್ಳಲು ಡೇಟಾ ಬಳಸಬೇಕು ಮತ್ತು ಅದರಿಂದ ಯಾವುದೇ ಪರಿಣಾಮ ಉಂಟಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಮಾಹಿತಿಯನ್ನು ಸಂಗ್ರಹಿಸಲು ಕೋಬೋ ಕಲೆಕ್ಟ್ (KoboCollect) ಮತ್ತು ಸರ್ವೇ CTO (Survey CTO) ರೀತಿಯ ಸರಿಯಾದ ಸಾಧನಗಳನ್ನು ಬಳಸುವುದು, ಎಚ್ಚರಿಕೆಯಿಂದ ಯೋಜನೆಯನ್ನು ರೂಪಿಸುವುದು ಮತ್ತು ಎಐ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ | Artificial Intelligence [AI]) ಬಳಸಿ ಸಮೀಕ್ಷೆಯ ಫಲಿತಾಂಶಗಳನ್ನು ಉತ್ತಮವಾಗಿ ಮತ್ತು ನಿಖರವಾಗಿ ವಿಶ್ಲೇಷಣೆ ಮಾಡುವುದರ ಬಗ್ಗೆಯೂ ತಿಳಿಸಿದರು. ಯೋಜನೆಯ ಅರ್ಧದಾರಿಯಲ್ಲೇ ವಿಷಯಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಮೌಲ್ಯಮಾಪನ ಮಾಡಲು ಪ್ರಾರಂಭಿಸುವ ಸವಾಲುಗಳ ಬಗ್ಗೆ ಮತ್ತು ಅಗತ್ಯವಿದ್ದರೆ ಯೋಜನೆಗಳನ್ನು ಬದಲಾಯಿಸಲು ಸಿದ್ಧವಾಗಿರುವುದು ಎಷ್ಟು ಮುಖ್ಯ ಎಂಬುದರ ಕುರಿತು ಅವರು ಮಾತನಾಡಿದರು. ಇದಲ್ಲದೆ ಅವರು ಆರ್ಗನೈಸೇಶನ್ ಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ತಮ್ಮ ಗುರಿಗಳನ್ನು ಸಾಧಿಸಲು ಮೇಲ್ವಿಚಾರಣೆ  ಮತ್ತು ಮೌಲ್ಯಮಾಪನವನ್ನು ಉತ್ತಮವಾಗಿ ಹೇಗೆ ಮಾಡುವುದು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು. 

ಒಟ್ಟಾರೆಯಾಗಿ, ಆರ್ಗನೈಸೇಶನ್ ನಲ್ಲಿ ಏನು ನಡೆಯುತ್ತಿವೆ ಎನ್ನುವುದರ ಕುರಿತು ಗಮನ ಹರಿಸಲು ಮತ್ತು ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಅಗತ್ಯವಿರುವ ಸಾಧನಗಳು ಮತ್ತು ತಿಳಿವಳಿಕೆಯನ್ನು ನೀಡಲು ಈ ಸೆಷನ್ ಉದ್ದೇಶಿಸಿತ್ತು. 


Please login or signup to view the resource.
Signup
ನಿಗಾವಣೆ-ಮತ್ತು-ಮೌಲ್ಯಮಾಪನME-ವ್ಯವಸ್ಥೆಗಳಲ್ಲಿ-ಡೇಟಾ-ಬಲಪಡಿಸುವುದು-1.pdf
4 MB
ನಿಗಾವಣೆ ಮತ್ತು ಮೌಲ್ಯಮಾಪನ(M&E) ವ್ಯವಸ್ಥೆಗಳಲ್ಲಿ ಡೇಟಾ ಬಲಪಡಿಸುವುದು
1:51:17
Share your feedback!
Did you find our resources useful and relevant? We'd love to hear from you
0.0 rating
2
Views
0
Downloads
Related Resources