ಡೋನರ್ ಡ್ಯೂ ಡಿಲಿಗೆನ್ಸ್ ಅರ್ಥಮಾಡಿಕೊಳ್ಳುವುದು
ಈ ಸಂದರ್ಭದಲ್ಲಿ ಡ್ಯೂ ಡಿಲಿಗೆನ್ಸ್ ಎಂದರೆ ಡೋನರ್ ಗಳು ನಾನ್-ಪ್ರಾಫಿಟ್ ಗಳಿಗೆ ಫಂಡ್ಸ್ ಗಳ ಅನುದಾನವನ್ನು ನೀಡುವ ಮೊದಲು ನಡೆಸುವ ಸೂಕ್ಶ್ಮ ತನಿಖೆ, ವಿಶ್ಲೇಷಣೆ ಮತ್ತು ಮೌಲ್ಯಮಾಪನವಾಗಿದೆ. ಡ್ಯೂ ಡಿಲಿಗೆನ್ಸ್ ಅನ್ನು ನಾನ್- ಪ್ರಾಫಿಟ್ ಸಿದ್ಧತೆಯನ್ನು ಮೌಲ್ಯಮಾಪನ ಮಾಡಲು, ಅವರ ಕಾನೂನುಬದ್ಧತೆಯನ್ನು, ನೈತಿಕ ಮಾನದಂಡಗಳನ್ನು ಮತ್ತು ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸಿಕೊಳ್ಳಲು ನಡೆಸಲಾಗುತ್ತದೆ. ಇದು ಅಕ್ರಮ ಅಥವಾ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಮೂಲಗಳಿಂದ ಫಂಡ್ಸ್ ಸ್ವೀಕರಿಸುವ ಅಪಾಯವನ್ನು ತಗ್ಗಿಸಲು ಸಹಾಯಮಾಡುತ್ತದೆ.
ಹೆಚ್ಚುವರಿಯಾಗಿ, ಡ್ಯೂ ಡಿಲಿಗೆನ್ಸ್ ನಾನ್-ಪ್ರಾಫಿಟ್ ಗಳ ಉದ್ದೇಶ, ಮೌಲ್ಯಗಳು ಮತ್ತು ಗುರಿಗಳು ಸಂಭಾವ್ಯ ಡೋನರ್ ಗಳ ಉದ್ದೇಶಗಳೊಂದಿಗೆ ಸರಿಹೊಂದಿಸುವುದನ್ನು ಖಾತ್ರಿಪಡಿಸುತ್ತದೆ, ಈ ಮೂಲಕ ಆರ್ಗನೈಸೇಶನ್ ನ ಪ್ರತಿಷ್ಠೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಮತ್ತು ಪರಸ್ಪರ ಲಾಭದಾಯಕ ಪಾಲುದಾರಿಕೆಗಳನ್ನು( ಪಾರ್ಟ್ನರ್ | Partner) ಪೋಷಿಸುತ್ತದೆ.
ನಾನ್-ಪ್ರಾಫಿಟ್ಸ್ ಈ ಟ್ಯುಟೋರಿಯಲ್ ಬಳಸಿ, ಈ ಕೆಳಗಿನದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ:
- ಆರ್ಗನೈಸೇಶನ್ ಮತ್ತು ಯೋಜನೆಯ ಹಂತದಲ್ಲಿ ಪ್ರಮುಖ CSR ಅಗತ್ಯತೆಗಳು
- ಡ್ಯೂ ಡಿಲಿಗೆನ್ಸ್ ನ ವಿವಿಧ ಅಂಶಗಳ ಮೇಲೆ ಡೋನರ್ ದೃಷ್ಟಿಕೋನ
- ಡ್ಯೂ ಡಿಲಿಗೆನ್ಸ್ ಸಮಯದಲ್ಲಿ ಗುರುತಿಸಲಾದ ಸಾಮಾನ್ಯ ವ್ಯತ್ಯಾಸಗಳು ಮತ್ತು ಅಪಾಯಗಳು ಮತ್ತು ಅವುಗಳನ್ನು ಪರಿಹರಿಸಲು ಅನುಸರಿಸಬೇಕಾದ ಅತ್ಯುತ್ತಮ ಕ್ರಮಗಳು
ಈ ಸಂಪನ್ಮೂಲವನ್ನು CSR ಫಂಡಿಂಗ್ ಮೇಲೆ ಪೂರ್ಣವಾಗಿ ಅಥವಾ ಭಾಗಶಃ ಅವಲಂಬಿಸಿರುವ ನಾನ್-ಪ್ರಾಫಿಟ್ಸ್ ಗಳಲ್ಲಿನ ಫಂಡ್ ರೈಸಿಂಗ್, ಕಾನೂನು, ಫೈನಾನ್ಸ್ ಮತ್ತು ಅಕೌಂಟಿಂಗ್ ತಂಡಗಳಿಗಾಗಿ ಶಿಫಾರಸ್ಸು ಮಾಡಲಾಗಿದೆ.