Fundraising / Retail Fundraising

ಚಿಲ್ಲರೆ ನಿಧಿ ಸಂಗ್ರಹಣೆ (ಫಂಡ್‌ರೈಸಿಂಗ್ | Fundraising) ಎಂದರೇನು?

Tutorial
Intermediate Danamojo

ಚಿಲ್ಲರೆ ನಿಧಿಸಂಗ್ರಹಣೆ ಎಂದರೆ ಭೌತಿಕ ಅಂಗಡಿಗಳು, ಆನ್ಲೈನ್ ವೇದಿಕೆಗಳು, ಕಾರ್ಯಕ್ರಮಗಳು ಇತ್ಯಾದಿ ರೀತಿಯ ವಿವಿಧ ಮಾಧ್ಯಮಗಳ ಮೂಲಕ ವೈಯಕ್ತಿಕ ಡೋನರ್ ಗಳ (Donor)  ದೊಡ್ಡ ಜಾಲದಿಂದ ಸಣ್ಣ ಮೊತ್ತದ ಹಣವನ್ನು ಸಂಗ್ರಹಿಸುವ ಪ್ರಕ್ರಿಯೆಯಾಗಿದೆ. ಚಿಲ್ಲರೆ ನಿಧಿಸಂಗ್ರಹವು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು, ನಿಧಿಯ ಮೂಲಗಳನ್ನು ವೈವಿಧ್ಯಗೊಳಿಸಲು, ಸಮುದಾಯಗಳೊಂದಿಗೆ ತೊಡಗಿಸಿಕೊಳ್ಳಲು, ಬ್ರ್ಯಾಂಡ್ ಅನ್ನು ನಿರ್ಮಿಸಲು ಮತ್ತು ನೀಡುವಿಕೆಯನ್ನು ಹೆಚ್ಚು ಪ್ರವೇಶಿಸಲು ಮೌಲ್ಯಯುತವಾದ ತಂತ್ರವಾಗಿದೆ.

ಈ  ಟ್ಯುಟೋರಿಯಲ್ ಲಾಭ-ರಹಿತ ಸಂಸ್ಥೆಗಳಿಗೆ ಇವುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ:  

  1. ಪ್ರಮುಖ ಚಿಲ್ಲರೆ ಲಾಭ-ರಹಿತ ಮಾರುಕಟ್ಟೆ ಪ್ರವೃತ್ತಿಗಳು 
  2. ಸರಿಯಾದ ನಿಧಿ ಸಂಗ್ರಹಣೆ ( ಫಂಡ್‌ರೈಸಿಂಗ್ | Fundraising) ಮಾಧ್ಯಮಗಳಿಗೆ ಹೇಗೆ ಹುಡುಕುವುದು 
  3. ಪ್ರಕರಣ ಅಧ್ಯಯನಗಳು ಸೇರಿದಂತೆ ಆನ್ಲೈನ್ ಮೂಲಕ ನಿಧಿ ಸಂಗ್ರಹಣೆ ( ಫಂಡ್‌ರೈಸಿಂಗ್ | Fundraising) ಪ್ರಚಾರಗಳನ್ನು( ಕ್ಯಾಂಪೈನ್ | Campaign) ಹೇಗೆ ರಚಿಸುವುದು 
  4. ದಾನಾ ಮೋಜೋ ಪಾವತಿ ಪರಿಹಾರಕ್ಕೆ ಪರಿಚಯ 

ಈ ಕೈಪಿಡಿಯನ್ನು ನಿಧಿ ಸಂಗ್ರಹಣೆ( ಫಂಡ್‌ರೈಸಿಂಗ್ | Fundraising)  ವೃತ್ತಿಪರರಿಗಾಗಿ ಮತ್ತು ನಿಧಿ ಸಂಗ್ರಹಣೆಯನ್ನು( ಫಂಡ್‌ರೈಸಿಂಗ್ | Fundraising)  ನಿರ್ವಹಣೆ ಮಾಡುವ ಲಾಭ-ರಹಿತ ನಾಯಕರಿಗಾಗಿ ಶಿಫಾರಸ್ಸು ಮಾಡಲಾಗಿದೆ 

ಕೈಪಿಡಿ ಸಾರಾಂಶ: 

NGO ಗಳಿಗೆ ನಿಧಿಸಂಗ್ರಹಣೆ, ಸ್ಥಿರತೆ ಮತ್ತು ನಿಧಿಯ ಮೂಲಗಳಲ್ಲಿ ವೈವಿಧ್ಯತೆಯನ್ನು ನೀಡಲು ವೈಯಕ್ತಿಕ ಡೋನರ್ ಗಳು (Donor)  ಅತ್ಯಗತ್ಯ. ಆನ್ಲೈನ್ ದೇಣಿಗೆಗಳು, ಅದರಲ್ಲೂ ಭಾರತದಲ್ಲಿ, ಡಿಜಿಟಲ್ ಪಾವತಿಗಳೊಂದಿಗೆ ಹೆಚ್ಚಾಗುತ್ತಿದೆ. ಇತರೆ ಡೋನರ್ (Donor) ವರ್ಗಗಳಿಗೆ ಹೋಲಿಸಿದರೆ ವೈಯಕ್ತಿಕ ಡೋನರ್ ಗಳು (Donor) ತಮ್ಮ ವೈಯಕ್ತಿಕ ಕಾರಣಗಳಿಂದ, ಕರ್ತವ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಕಾರಣಗಳಿಂದ ದೇಣಿಗೆ ನೀಡುತ್ತಾರೆ ಮತ್ತು ತ್ವರಿತ ನಿರ್ಧಾರ ಪ್ರಕ್ರಿಯೆಯನ್ನು ಹೊಂದಿದ್ದಾರೆ. ಡೋನರ್ (Donor) ಗುರುತನ್ನು ಒತ್ತಿ ಹೇಳುವುದು, ಕೇಳುವುದು, ಧನ್ಯವಾದಗಳನ್ನು ಅರ್ಪಿಸುವುದು, ಉಳಿಸಿಕೊಳ್ಳುವುದು ಮತ್ತು ಪೋಷಿಸುವುದು - ಈ ಐದು ಪ್ರಮುಖ ಹಂತಗಳ ಬಗ್ಗೆ ಯಶಸ್ವಿ ನಿಧಿ ಸಂಗ್ರಹಣೆ ( ಫಂಡ್‌ರೈಸಿಂಗ್ | Fundraising) ಅವಲಂಬಿಸಿದೆ ಎಂದು ಬಣ್ಣಿಸಲಾಗಿದೆ. ಅನುಸರಣೆಯ (ಕಾಂಪ್ಲಯನ್ಸ್  | Compliance) ಅವಶ್ಯಕತೆಗಳು ಅನಾಮಧೇಯ ದೇಣಿಗೆಗಳನ್ನು ತಪ್ಪಿಸಲು ನಿರ್ದಿಷ್ಟ ಮಾಹಿತಿಯನ್ನು ಸಂಗ್ರಹಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ. ಗುರಿಗಳು ಮತ್ತು ಯಶಸ್ಸನ್ನು ಸಾಧಿಸಲು ಪರಿಣಾಮಕಾರಿ ಸಂವಹನವನ್ನು (ಕಮ್ಯುನಿಕೇಷನ್ | Communication) ಸೆಷನ್ ಒತ್ತಿಹೇಳುತ್ತದೆ. ಸಂಬಂಧಗಳನ್ನು ನಿರ್ಮಿಸಲು ವಿವಿಧ ಸಂವಹನ (ಕಮ್ಯುನಿಕೇಷನ್ | Communication) ಶೈಲಿಗಳನ್ನು ಅರ್ಥಮಾಡಿಕೊಳ್ಳುವುದು ನಿರ್ಣಾಯಕವಾಗಿದೆ. ವಿಭಿನ್ನ ಸಂದರ್ಭಗಳಲ್ಲಿ ಸಹಯೋಗ ಮತ್ತು ಸ್ಪಷ್ಟ ಸಂವಹನದ (ಕಮ್ಯುನಿಕೇಷನ್ | Communication) ಪ್ರಾಮುಖ್ಯತೆಯನ್ನು ಒತ್ತಿಹೇಳಲಾಗಿದೆ.

ದಾನಾ ಮೋಜೋ ದೇಣಿಗೆ ಆಯ್ಕೆಗಳು ಮತ್ತು ಡೋನರ್ (Donor) ತೊಡಗಿಸಿಕೊಳ್ಳುವಿಕೆ ಪ್ರಚಾರಗಳ( ಕ್ಯಾಂಪೈನ್ | Campaign) ಸರಳ ಏಕೀಕರಣವನ್ನು ಸಕ್ರಿಯಗೊಳಿಸುವ ಮೂಲಕ ನಿಧಿ ಸಂಗ್ರಹಣೆಗಾಗಿ ( ಫಂಡ್‌ರೈಸಿಂಗ್ | Fundraising) ಅಗ್ಗ -ಬೆಲೆಯ ಮತ್ತು ಕಾನೂನಾತ್ಮಕವಾಗಿರುವ ವೇದಿಕೆಯನ್ನು ಒದಗಿಸುತ್ತದೆ. ಈ ವೇದಿಕೆಯು ಬಹು ವೇದಿಕೆ ಬಳಕೆಗಾಗಿ ರಿಯಾಯಿತಿಗಳನ್ನು ನೀಡುವ ಮೂಲಕ NGOಗಳಿಗಾಗಿ ಅನುಕೂಲಕರ ಮತ್ತು ಸಮರ್ಥ ಪರಿಹಾರವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ವೇದಿಕೆಯ ಬ್ರ್ಯಾಂಡೆಡ್ ವೆಬ್ ಪುಟವು ನಿಧಿ ಸಂಗ್ರಹಣೆ( ಫಂಡ್‌ರೈಸಿಂಗ್ | Fundraising)  ಅನುಭವವನ್ನು ದುಪ್ಪಟ್ಟಾಗಿಸಲು ವೈಯಕ್ತಿಕಗೊಳಿಸಲಾದ ಡೋನರ್ (Donor) ಪ್ರತಿಕ್ರಿಯೆಗಳ ವೈಶಿಷ್ಟ್ಯತೆಯನ್ನು ಸಹ ಅನುಮತಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ದಾನಾ ಮೋಜೋ ತನ್ನ ನಿಧಿ ಸಂಗ್ರಹಣೆ (ಫಂಡ್‌ರೈಸಿಂಗ್ | Fundraising) ಪ್ರಯತ್ನಗಳಲ್ಲಿ NGOಗಳಿಗೆ ಬೆಂಬಲ ನೀಡಲು ಪರಿಣಾಮಕಾರಿ ಡೋನರ್ ನಿರ್ವಹಣೆ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಸುಗಮಗೊಳಿಸುತ್ತದೆ. 


Please login or signup to view the resource.
Signup
ಚಿಲ್ಲರೆ-ನಿಧಿ-ಸಂಗ್ರಹಣೆ-ಫಂಡ್‌ರೈಸಿಂಗ್-Fundraising-ಎಂದರೇನು-1.pdf
904 KB
ಚಿಲ್ಲರೆ-ನಿಧಿ-ಸಂಗ್ರಹಣೆ-ಫಂಡ್‌ರೈಸಿಂಗ್-Fundraising-ಎಂದರೇನು-2.pdf
997 KB
ಚಿಲ್ಲರೆ ನಿಧಿ ಸಂಗ್ರಹಣೆ (ಫಂಡ್‌ರೈಸಿಂಗ್ | Fundraising) ಎಂದರೇನು?
1:27:45
Share your feedback!
Did you find our resources useful and relevant? We'd love to hear from you
0.0 rating
2
Views
1
Downloads
Related Resources