Technology and Data / Internal IT

ತಂತ್ರಜ್ಞಾನದೊಂದಿಗೆ ಲಾಭ-ರಹಿತ (ನಾನ್‌ ಪ್ರಾಫಿಟ್ | Non-Profit) ಕಾರ್ಯಾಚರಣೆಗಳನ್ನು ಮಾರ್ಪಡಿಸುವುದು

Tutorial
Basic Platform Commons

ತಂತ್ರಜ್ಞಾನವು ಆಡಳಿತಾತ್ಮಕ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವುದು, ಡೋನರ್ (Donor) ನಿರ್ವಹಣೆಯನ್ನು ವೃದ್ಧಿಸುವುದು ಮತ್ತು ದೂರಸ್ಥ ಪಾಲುದಾರಿಕೆಯನ್ನು( ಪಾರ್ಟ್ನರ್ | Partner) ಅನುವುಗೊಳಿಸುವ ಮೂಲಕ ಲಾಭ-ರಹಿತ ಸಂಸ್ಥೆಗಳ (ನಾನ್‌ ಪ್ರಾಫಿಟ್ | Non-Profit) ಕಾರ್ಯಾಚರಣೆಗಳನ್ನು ಕ್ರಾಂತಿಕಾರಿಗೊಳಿಸುತ್ತದೆ. ತಂತ್ರಜ್ಞಾನ ಪರಿಹಾರಗಳು ಕೆಲಸದ ಹರಿವನ್ನು ಸುಗಮಗೊಳಿಸುತ್ತದೆ, ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ದಕ್ಷತೆಯನ್ನು ಸುಧಾರಿಸುತ್ತದೆ. ಡೇಟಾ ವಿಶ್ಲೇಷಕ ಸಾಧನಗಳು ಕಾರ್ಯತಾಂತ್ರಿಕ ನಿರ್ಧಾರ-ತೆಗೆದುಕೊಳ್ಳಲು ಅವಲೋಕನಗಳನ್ನು ಒದಗಿಸಲು, ಸಂಪನ್ಮೂಲ ಹಂಚಿಕೆಯನ್ನು ಗರಿಷ್ಠಗೊಳಿಸಲು ಅವಲೋಕನಗಳನ್ನು ಒದಗಿಸುತ್ತದೆ. ನಿಧಿ ಸಂಗ್ರಹಣೆಗಾಗಿ ( ಫಂಡ್‌ರೈಸಿಂಗ್ | Fundraising) ಆನ್ಲೈನ್ ಪ್ಲಾಟ್ಫಾರ್ಮ್ ಗಳು ಮತ್ತು ಸ್ವಯಂಪ್ರೇರಿತ ನಿರ್ವಹಣೆಯು ವ್ಯಾಪ್ತಿ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ವಿಸ್ತರಿಸುತ್ತದೆ. ಒಟ್ಟಾರೆಯಾಗಿ, ತಂತ್ರಜ್ಞಾನವು ಕಾರ್ಯಗಳನ್ನು ಆಧುನೀಕರಣ ಮತ್ತು ಡಿಜಿಟಲ್ ನಾವಿನ್ಯತೆ ಮೂಲಕ ತಮ್ಮ ಪ್ರಭಾವವನ್ನು ಗರಿಷ್ಠಗೊಳಿಸಲು ಲಾಭ-ರಹಿತ (ನಾನ್‌ ಪ್ರಾಫಿಟ್ | Non-Profit) ಸಂಸ್ಥೆಗಳಿಗೆ ಸಶಕ್ತಗೊಳಿಸುತ್ತದೆ. 

 

ಈ ಕೈಪಿಡಿ ನಿಮಗೆ ಈ ರೀತಿಯಾಗಿ ಸಹಾಯ ಮಾಡುತ್ತದೆ: 

  1. ಡಿಜಿಟಲ್ ಸಿದ್ಧತೆ ಮತ್ತು ಅದರ ಅಗತ್ಯತೆಯನ್ನು ಅರ್ಥಮಾಡಿಕೊಳ್ಳಲು 
  2. HR, ಫೈನಾನ್ಸ್ ಮತ್ತು ಅಕೌಂಟಿಂಗ್, ಡೋನರ್ (Donor) ನಿರ್ವಹಣೆ, CRM ಮತ್ತು ಇನ್ನೂ ಹಲವು ರೀತಿಯ ಮಾಡ್ಯೂಲ್ ಗಳನ್ನು ಒಳಗೊಳ್ಳುವ ಮೂಲಕ ಚಾಲನೆಯಲ್ಲಿರುವ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ವಿಶೇಷ ಸಾಫ್ಟವೇರ್ ಮತ್ತು ಸ್ವಯಂಚಾಲಿತ ಸಾಧನಗಳನ್ನು ಬಳಸುವುದರಿಂದ ಉಂಟಾಗುವ ಪ್ರಯೋಜನಗಳ ಕಲಿಕೆ 
  3. ಡೋನರ್ ಗಳು, (Donor) ಸ್ವಯಂ-ಸೇವಕರು, ಫಲಾನುಭವಿಗಳು ಸಂಬಂಧಗಳನ್ನು ಬಲಿಷ್ಠಗೊಳಿಸಲು ತಂತ್ರಜ್ಞಾನವು ಹೇಗೆ ಸಾಹಯ ಮಾಡುತ್ತದೆ ಎಂದು ಅರ್ಥಮಾಡಿಕೊಳ್ಳಲು ಮತ್ತು ವಿಸ್ತೃತ ಸಮುದಾಯದ ಡಿಜಿಟಲ್ ಮಾರ್ಕೆಟಿಂಗ್, ಸಾಮಾಜಿಕ ಮಾಧ್ಯಮ ಮತ್ತು ಸಂವಹನ ತಂಡಗಳು ಈ ಕೈಪಿಡಿಯಿಂದ ಲಾಭ ಪಡೆಯಬಹುದು ಹೇಗೆ ಎಂದು ಅರ್ಥಮಾಡಿಕೊಳ್ಳಲು  

ಕೈಪಿಡಿ ಸಾರಾಂಶ: 

ಈ ಸೆಷನ್ (Session) ಲಾಭ-ರಹಿತ ಸಂಸ್ಥೆಗಳು (ನಾನ್‌ ಪ್ರಾಫಿಟ್ | Non-Profit) ಡಿಜಿಟಲ್ ತಂತ್ರಜ್ಞಾನವನ್ನು ಬಳಸಲು ಏಕೆ ಸಿದ್ಧವಾಗಿರಬೇಕು, ಅದು ಏಕೆ ಮುಖ್ಯ ಎಂಬುದರ ಕುರಿತು ಚರ್ಚಿಸುತ್ತದೆ. ತಂತ್ರಜ್ಞಾನ ಹೇಗೆ ಸಂಘಟನೆ ಅಥವಾ ಸಂಸ್ಥೆಗಳಿಗೆ ವಿಭಿನ್ನ ವಿಧಗಳಲ್ಲಿ ಸಹಾಯ ಮಾಡುತ್ತದೆ ಮತ್ತು ಅದನ್ನು ಆಯ್ಕೆ ಮಾಡುವಾಗ ಮತ್ತು ಬಳಸುವಾಗ ಏನನ್ನು ನಿರೀಕ್ಷಿಸಬೇಕು ಎಂಬುದನ್ನು ಸಹ ವಿವರಿಸುತ್ತದೆ. ಈ ಸೆಷನ್ ನಲ್ಲಿ (Session)  ಕೆಲಸದಲ್ಲಿ ಡಿಜಿಟಲ್ ವ್ಯವಸ್ಥೆಗಳ ಬಳಕೆ, ಸರಿಯಾದ ತಂತ್ರಜ್ಞಾನದ ಆಯ್ಕೆ, ಸಂಸ್ಥೆಯ ಗುರಿಗಳೊಂದಿಗೆ ಹೊಂದಾಣಿಕೆಯಾಗುವುದು ರೀತಿಯ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಹಣ ನಿರ್ವಹಣೆ, ಸಂಸ್ಥೆ ನಿರ್ಮಾಣ, ಸ್ವಯಂಸೇವಕರನ್ನು ಸೇರಿಸುವುದು ಮತ್ತು ನಿಧಿಗಳನ್ನು ಸಂಗ್ರಹಿಸುವುದು ರೀತಿಯ ವಿಷಯಗಳಲ್ಲಿ ತಂತ್ರಜ್ಞಾನ ನಿಜಕ್ಕೂ ಪ್ರಯೋಜನಕಾರಿಯಾಗಿರುವ ಬಗ್ಗೆ ಸಹ ಚರ್ಚಿಸಲಾಯಿತು. ಅಲ್ಲಿ ಈ ಹೊಸ ವಿಚಾರಗಳನ್ನು ಕ್ರಿಯೆಯಲ್ಲಿ ಅಳವಡಿಸಲು ಸರಿಯಾದ ಸಾಧನಗಳನ್ನು ಆಯ್ಕೆ ಮಾಡುವುದು ಮತ್ತು ಯೋಜನೆಗಳನ್ನು ರೂಪಿಸುವುದರ ಬಗ್ಗೆ ಸಲಹೆ ಸಹ ನೀಡಲಾಯಿತು. ಅದರಲ್ಲಿ ಒಂದು ಸಂಸ್ಥೆಯು ಎಷ್ಟು ಹಣವನ್ನು ಮೀಸಲಿಡಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆಸಲಾಯಿತು. ಜೊತೆಗೆ ಒಟ್ಟು ಬಜೆಟ್ ನ ಸುಮಾರು 3-7%ರಷ್ಟು ಹಣವನ್ನು ಡಿಜಿಟಲ್ ಚಟುವಟಿಕೆಗಳಿಗಾಗಿ ಮೀಸಲಿಡಬೇಕು ಎಂದೂ ಸಲಹೆ ನೀಡಲಾಯಿತು. ಡಿಜಿಟಲ್ ಆಗಲು ಅಗತ್ಯವಿರುವ ಅತ್ಯಂತ ಪ್ರಮುಖ ವಿಷಯಗಳ ಪ್ರಾಮುಖ್ಯತೆಗೆ ಕೇಂದ್ರೀಕರಿಸುವ ಮತ್ತು ದೀರ್ಘಾವಧಿಯಲ್ಲಿ ಅವರಿಗೆ ಸಹಾಯ ಮಾಡುವ ಆಯ್ಕೆಗಳನ್ನು ಆರಿಸುವ ಕಡೆಗೆ ಒತ್ತು ನೀಡಲಾಯಿತು. ತಮ್ಮ ಸಂಸ್ಥೆಗಳನ್ನು ಉತ್ತಮಗೊಳಿಸಲು ಮತ್ತು ದೊಡ್ಡ ಪರಿಣಾಮವನ್ನು ಬೀರಲು ತಂತ್ರಜ್ಞಾನವನ್ನು ಹೇಗೆ ಚೆನ್ನಾಗಿ ಬಳಸಬೇಕು ಎಂಬುದರ ಕುರಿತು ಸಂಸ್ಥೆಗಳಿಗೆ ಪ್ರಾಯೋಗಿಕ ಸಲಹೆ ಮತ್ತು ಆಲೋಚನೆಗಳನ್ನು ನೀಡುವುದು ಸೆಷನ್ ನ (Session) ಗುರಿಯಾಗಿದೆ.


Please login or signup to view the resource.
Login Signup
ತಂತ್ರಜ್ಞಾನದೊಂದಿಗೆ-ಲಾಭ-ರಹಿತ-ನಾನ್‌-ಪ್ರಾಫಿಟ್-Non-Profit-ಕಾರ್ಯಾಚರಣೆಗಳನ್ನು-ಮಾರ್ಪಡಿಸುವುದು.pdf
1 MB
ತಂತ್ರಜ್ಞಾನದೊಂದಿಗೆ ಲಾಭ-ರಹಿತ (ನಾನ್‌ ಪ್ರಾಫಿಟ್ | Non-Profit) ಕಾರ್ಯಾಚರಣೆಗಳನ್ನು ಮಾರ್ಪಡಿಸುವುದು
1:25:04
Share your feedback!
Did you find our resources useful and relevant? We'd love to hear from you
0.0 rating
0
Views
0
Downloads
Related Resources