ಕಚ್ಚಾ ( ರಾ | Raw ) ಡೇಟಾದಿಂದ ಅವಲೋಕನಗಳವರೆಗೆ (ಇನ್‌ಸೈಟ್ | Insight ) : ಲಾಭ-ರಹಿತ (ನಾನ್ ಪ್ರಾಫಿಟ್ | Non-Profit ) ಸಂಸ್ಥೆಗಳಿಗಾಗಿ ತಂತ್ರಜ್ಞಾನದೊಂದಿಗೆ ಡೇಟಾ ವಿಶ್ಲೇಷಣೆ
ಲಾಭ-ರಹಿತ ಸಂಸ್ಥೆಗಳು (ನಾನ್ ಪ್ರಾಫಿಟ್ | Non-Profit ) ತಮ್ಮ ಯೋಜನೆಯ ಫಲಿತಾಂಶಗಳನ್ನು ಪಡೆಯಲು ವಿಸ್ತೃತ ಮೊತ್ತದ ಡೇಟಾ ಸಂಗ್ರಹಿಸಲು ಮತ್ತು ವಿಶ್ಲೇಷಣೆ ಮಾಡಲು ತಂತ್ರಜ್ಞಾನ ಅನುಕೂಲತೆಯನ್ನು ಮಾಡಿಕೊಡುತ್ತದೆ. ಇತ್ತೀಚಿನ ಪ್ರವೃತ್ತಿಗಳನ್ನು ಗುರುತಿಸಲು, ಪ್ರಭಾವವನ್ನು ಅಳತೆ ಮಾಡಲು ಮತ್ತು ಭವಿಷ್ಯದ ಅಗತ್ಯತೆಗಳನ್ನು ಊಹಿಸಲು ಮತ್ತು ಕಾರ್ಯತಾಂತ್ರಿಕ ನಿರ್ಣಯ ತೆಗೆದುಕೊಳ್ಳಲು ಅಡ್ವಾನ್ಸಡ್ ಅನಾಲಿಟಿಕ್ಸ್ ಟೂಲ್ಸ್ ಸಹಾಯ ಮಾಡುತ್ತದೆ. ಡೇಟಾ ವಿಶುವಲೈಸೇಶನ್ ತಂತ್ರಗಳು ಪಾಲುದಾರರೊಂದಿಗೆ( ಪಾರ್ಟ್ನರ್ | Partner) ಸಂವಹನವನ್ನು ( ಕಮ್ಯುನಿಕೇಷನ್ | Communication ) ಅನುವುಗೊಳಿಸಲು ಸಂಕೀರ್ಣ ಮಾಹಿತಿಯನ್ನು ಸರಳ ಚಟುವಟಿಕೆಯ ತಂತ್ರಗಳಾಗಿ ಮಾರ್ಪಾಡು ಮಾಡುತ್ತವೆ. ಗರಿಷ್ಟ ಪರಿಣಾಮಕಾರಿತ್ವಕ್ಕಾಗಿ ಮಷೀನ್ ಲರ್ನಿಂಗ್ ಅಲ್ಗಾರಿದಮ್ ಗಳು ಗುಪ್ತ ಮಾದರಿಗಳನ್ನು ಬಹಿರಂಗಪಡಿಸಬಹುದು ಮತ್ತು ಸಂಪನ್ಮೂಲ ಹಂಚಿಕೆಯನ್ನು ಮತ್ತಷ್ಟು ಉತ್ತಮಗೊಳಿಸಬಹುದು. ಕೊನೆಯದಾಗಿ, ಸಾಮಾಜಿಕ ಸವಾಲುಗಳನ್ನು ಸಮರ್ಥವಾಗಿ ಪರಿಹರಿಸುವ ಅವರ ಸಾಮರ್ಥ್ಯವನ್ನು ಹೆಚ್ಚಿಸುವ ಪುರಾವೆ-ಆಧಾರಿತ ನಿರ್ಣಯಗಳನ್ನು ತೆಗೆದುಕೊಳ್ಳಲು ತಂತ್ರಜ್ಞಾನವು ಲಾಭ-ರಹಿತ ಸಂಸ್ಥೆಗಳಿಗೆ ( ನಾನ್ ಪ್ರಾಫಿಟ್ | Non-Profit) ಅಧಿಕಾರ ನೀಡುತ್ತದೆ.
ಈ ಕೈಪಿಡಿಯಲ್ಲಿ ಒಂದು ಟುಟೋರಿಯಲ್ ವಿಡಿಯೋ ಮತ್ತು ಒಂದು ಪ್ರಸ್ತುತಿ(ಪ್ರೆಸೆಂಟೇಶನ್ | Presentation) ಡೆಕ್ ಇರುತ್ತದೆ, ಇದು ನಿಮಗೆ ಈ ಕೆಳಗಿನವುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ:
- ಲಾಭ-ರಹಿತಗಳಿಗಾಗಿ (ನಾನ್ ಪ್ರಾಫಿಟ್ | Non-Profit) ಡೇಟಾ ಬಹುಮೌಲ್ಯ ಸ್ವತ್ತು, ಇದು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಪ್ರಭಾವವನ್ನು ಕಾರ್ಯತಂತ್ರಿಕವಾಗಿ ಪ್ರದರ್ಶಿಸಲು ಸಹಾಯ ಮಾಡುತ್ತದೆ.
- ಸೀಮಿತ ಸಮಯ ಮತ್ತು ಸಂಪನ್ಮೂಲಗಳನ್ನು ಬಳಸಿ ಡೇಟಾ ಅನಾಲಿಸಿಸ್ ಗಾಗಿ ನೀವು ನಿಯಂತ್ರಿಸಬಹುದಾದ ಪರಿಕರಗಳು ಮತ್ತು ತಂತ್ರಗಳು
- ನಿಮ್ಮ ಡೇಟಾ ವಿಶ್ಲೇಷಣೆಯ ಫಲಿತಾಂಶಗಳಿಂದ ಕಾರ್ಯಾಚರಣೆಯ ತಂತ್ರಗಳನ್ನು ಹೇಗೆ ರಚಿಸುವುದು.
- ಪಾಲುದಾರರಿಗೆ( ಪಾರ್ಟ್ನರ್ | Partner) ಡೇಟಾ ಚಾಲಿತ ಅವಲೋಕನಗಳನ್ನು ಹೇಗೆ ತಿಳಿಸುವುದು.
ಇದು ಸಂಸ್ಥೆಯೊಳಗಿನ ಡೇಟಾ ಸಂಗ್ರಹಣೆ, ನಿರ್ವಹಣೆ ಮತ್ತು ಸಂವಹನದಲ್ಲಿ ತೊಡಗಿಸಿಕೊಂಡಿರುವ NGOಗಳ ನೇತೃತ್ವ ತಂಡ, ಪ್ರೋಗ್ರಾಮ್ ತಂಡ ಮತ್ತು M&E ತಂಡಕ್ಕಾಗಿ ಶಿಫಾರಸ್ಸು ಮಾಡಲಾಗಿದೆ.